ವಿಜಯೇಂದ್ರನ ಕೆಲಸಗಳನ್ನು ವರಿಷ್ಠರು ಗಮನಿಸುತ್ತಿದ್ದಾರೆ, ಮುಂದೆ ಅವಕಾಶ ನೀಡಲಿದ್ದಾರೆ: ಯಡಿಯೂರಪ್ಪ
ಟಿಕೆಟ್ ತಪ್ಪುವುದಕ್ಕೆ ಬಿ ಎಲ್ ಸಂತೋಷ ಕಾರಣ ಅನ್ನೋದನ್ನು ಯಡಿಯೂರಪ್ಪ ತಳ್ಳಿ ಹಾಕಿದರು. ಟಿಕೆಟ್ ತಪ್ಪಿದ್ದಕ್ಕೆ ಅವರು ಕಾರಣರಲ್ಲ, ಅದಕ್ಕೂ ಅವರಿಗೂ ಸಂಬಂಧವಿಲ್ಲ, ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆಯಾಗುತ್ತಿದೆ ಎಂದು ಅವರು ಹೇಳಿದರು.
Bengaluru: ಭಾರತೀಯ ಜನತಾ ಪಕ್ಷ ಕರ್ನಾಟಕ ಘಟಕದ ಉಪಾಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ (BS Yediyurappa) ಅವರ ಪುತ್ರ ಬಿ ವೈ ವಿಜಯೇಂದ್ರ (BY Vijayendra) ಅವರಿಗೆ ಪಕ್ಷದ ವರಿಷ್ಠರು ವಿದಾಧನ ಪರಿಷತ್ ಚುನಾವಣೆಗೆ (council polls) ಟಿಕೆಟ್ ನಿರಾಕರಿಸಿರುವುದು ರಾಜ್ಯ ರಾಜಕೀಯ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಹೈಕಮಾಂಡ್ ನ ಕ್ರಮ ಯಡಿಯೂರಪ್ಪನವರಲ್ಲಿ ಬೇಸರ ಮೂಡಿಸಿದ್ದರೆ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪುತ್ತಿರೋದು ಅಥವಾ ತಪ್ಪಿಸುತ್ತಿರೋದು ಇದು ಎರಡನೇ ಬಾರಿ. ಬೆಂಗಳೂರಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಯಡಿಯೂರಪ್ಪ ಟಿಕೆಟ್ ತಪ್ಪಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಈಗ ಟಿಕೆಟ್ ನೀಡಿಲ್ಲದಿರಬಹುದು, ಆದರೆ ಭವಿಷ್ಯದಲ್ಲಿ ವಿಜಯೇಂದ್ರನಿಗೆ ಬೇರೆ ಬೇರೆ ಅವಕಾಶಗಳನ್ನು ಕಲ್ಪಿಸುವ ಭರವಸೆ ನನಗಿದೆ. ಸಾಮರ್ಥ್ಯ ಮತ್ತು ನಿಷ್ಠೆ ಇರುವವರನ್ನು ಪಕ್ಷ ಯಾವತ್ತೂ ಕೈ ಬಿಡೋದಿಲ್ಲ. ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರೋದು ನಮ್ಮ ಸದ್ಯದ ಗುರಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಪಕ್ಷ ಪುನಃ ಅಧಿಕಾರ ಬರಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಟಿಕೆಟ್ ತಪ್ಪುವುದಕ್ಕೆ ಬಿ ಎಲ್ ಸಂತೋಷ ಕಾರಣ ಅನ್ನೋದನ್ನು ಯಡಿಯೂರಪ್ಪ ತಳ್ಳಿ ಹಾಕಿದರು. ಟಿಕೆಟ್ ತಪ್ಪಿದ್ದಕ್ಕೆ ಅವರು ಕಾರಣರಲ್ಲ, ಅದಕ್ಕೂ ಅವರಿಗೂ ಸಂಬಂಧವಿಲ್ಲ, ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆಯಾಗುತ್ತಿದೆ ಎಂದು ಅವರು ಹೇಳಿದರು.
ಪುನಃ ವಿಜಯೇಂದ್ರ ಬಗ್ಗೆ ಮಾತು ಬಂದಾಗ ಯಡಿಯೂರಪ್ಪನವರು, ಮುಂದಿನ ದಿನಗಳಲ್ಲಿ ಅವಕಾಶ ನೀಡುತ್ತಾರೆ, ಅವರು ಪಕ್ಷದ ಸಂಘಟನೆಗಾಗಿ ನಿಷ್ಠೆಯಿಂದ ದುಡಿಯುತ್ತಿರುವುದನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರರು ಗಮನಿಸುತ್ತಿದ್ದಾರೆ. ಹಾಗಾಗಿ ಬೇಸರಿಸಿಕೊಳ್ಳುವ ಸಂಗತಿಯೇನೂ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.