ಕೆಸಿಆರ್ ಫಾರ್ಮ್ ಹೌಸ್ ನಲ್ಲಿ ಭಾರಿ ಜನಸ್ತೋಮ.. 9 ಬಸ್ ಗಳಲ್ಲಿ ದೌಡಾಯಿಸಿದ ಚಿಂತಮಡಕ ಗ್ರಾಮಸ್ಥರು

| Updated By: Ganapathi Sharma

Updated on: Dec 07, 2023 | 3:39 PM

KCR: ತಮ್ಮ ಎರ್ರವೆಲ್ಲಿ ಫಾರ್ಮ್ ಹೌಸ್ ಗೆ ತೆರಳಿರುವ ಹಿಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್ ಜಯಶಾಲಿ ಬಿಆರ್ ಎಸ್ ಶಾಸಕರ ಜೊತೆ ನಿನ್ನೆ ಬುಧವಾರ ಸಭೆ ನಡೆಸಿದರು. ತೆಲಂಗಾಣ ಅಸೆಂಬ್ಲಿಯಲ್ಲಿ ಪ್ರತಿಪಕ್ಷದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದರಂತೆ.

ತೆಲಂಗಾಣ (Telangana) ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಸೋತಿದ್ದು ಗೊತ್ತಿದೆ. ಇದರ ಭಾಗವಾಗಿ ಹಿಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ (ಕೆಸಿಆರ್ K Chandrashekar Rao -KCR) ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎರ್ರವೆಲ್ಲಿ ಫಾರ್ಮ್ ಹೌಸ್ ಗೆ ತೆರಳಿದ್ದರು. ಹೀಗಿರುವಾಗ ಜಯಶಾಲಿ ಬಿಆರ್ ಎಸ್ ಶಾಸಕರ ಜೊತೆ ನಿನ್ನೆ ಬುಧವಾರ ಸಭೆ ನಡೆಸಲಾಗಿತ್ತು. ಸೋಲಿಗೆ ಕಾರಣಗಳೇನು ಎಂದು ಪರಾಮರ್ಷಿಸಲಾಯಿತು. ಇದೇ ವೇಳೆ, ತೆಲಂಗಾಣ ಅಸೆಂಬ್ಲಿಯಲ್ಲಿ ಪ್ರತಿಪಕ್ಷದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆಯಂತೆ.

ಈ ನಡುವೆ ಇಂದು ಗುರುವಾರ ಕೆಸಿಆರ್ ಅವರ ತೋಟದ ಮನೆಗೆ ಕಾರ್ಯಕರ್ತರು ಆಗಮಿಸಿದ್ದರು. 9 ಬಸ್ ಗಳಲ್ಲಿ 540ಕ್ಕೂ ಹೆಚ್ಚು ಕಾರ್ಯಕರ್ತರು ಮಾಜಿ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಲು ಉತ್ಸಾಹ ತೋರಿದರು. ಇದರಿಂದಾಗಿ ಅವರ ಎರ್ರವೆಲ್ಲಿ ತೋಟದ ಮನೆಯು ಬಿಆರ್ ಎಸ್ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು. ಚುನಾವಣಾ ಫಲಿತಾಂಶದ ನಂತರ ಕೆಸಿಆರ್ ಎರ್ರವೆಲ್ಲಿಯ ತಮ್ಮ ಜಮೀನಿನಲ್ಲಿ ತಂಗಿದ್ದಾರೆ. ಇಂದು ಆಗಮಿಸಿದ ಚಿಂತಮಡಕ ಗ್ರಾಮಸ್ಥರೊಂದಿಗೆ ಕೆಲಕಾಲ ಮಾತನಾಡಿದರು. ಕೊನೆಗೆ ತನಗೆ ತೋರಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 07, 2023 03:26 PM