ಬೆಳಗಾವಿ ಅಧಿವೇಶನ: ಇವತ್ತೂ ಮುಂದುವರಿದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಶ್ವಥ್ ನಾರಾಯಣ ನಡುವೆ ದ್ವಂದ್ವಯುದ್ಧ!

ಬೆಳಗಾವಿ ಅಧಿವೇಶನ: ಇವತ್ತೂ ಮುಂದುವರಿದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಶ್ವಥ್ ನಾರಾಯಣ ನಡುವೆ ದ್ವಂದ್ವಯುದ್ಧ!

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 07, 2023 | 2:31 PM

ಅಶ್ವಥ್ ನಾರಾಯಣ ಎದ್ದುನಿಂತು ಪ್ರತಿಪಕ್ಷದ ನಾಯಕ ಯಾರನ್ನು ಪ್ರಶ್ನೆ ಕೇಳಬೇಕು ಅಂತ ಹೇಳಿದಾಗ ಮಧ್ಯಪ್ರವೇಶಿಸುವ ಸ್ಪೀಕರ್ ಯುಟಿ ಖಾದರ್, ವಿರೋಧ ಪಕ್ಷದ ನಾಯಕ ಮಾತಾಡುವಾಗ ಅಶ್ವಥ್ ನಾರಾಯಣ ಪದೇಪದೆ ಯಾಕೆ ಎದ್ದು ನಿಂತು ಅಡ್ಡಿಪಡಿಸೋದು ಅಂದಾಗ ಮಲ್ಲೇಶ್ವರಂ ಶಾಸಕ ಪೆಚ್ಚುಮೋರೆ ಹಾಕ್ಕೊಂಡು ಕೂರುತ್ತಾರೆ.

ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ನಡುವೆ ಪ್ರತಿದಿನ ಜುಗಲ್ ಬಂದಿ ನಡೆಯುತ್ತಿದೆ. ಅಧಿವೇಶನದ ನಾಲ್ಕನೇ ದಿನವಾಗಿರುವ ಇಂದು ಸದನದಲ್ಲಿ ಬಿಜೆಪಿ ಶಾಸಕ ಸುನೀಲ ಕುಮಾರ (Sunil Kumar) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ, ಕೃಷಿ ಸಚಿವ ಮೊದಲಾದವರು ಸದನದಲ್ಲಿ ಉಪಸ್ಥಿತರಿಲ್ಲ, ಯಾರನ್ನು ಪ್ರಶ್ನೆ ಕೇಳೋದು ಅಂದಾಗ ಖರ್ಗೆ ಎದ್ದುನಿಂತು, ಆರು ಸಚಿವರು ಸದನಲ್ಲಿದ್ದಾರೆ, 2-3 ಸಚಿವರು ಮೇಲ್ಮನೆಯಲ್ಲಿದ್ದಾರೆ ಅನ್ನುತ್ತಾರೆ. ಆಗ ಅಶ್ವಥ್ ನಾರಾಯಣ ಎದ್ದುನಿಂತು ಪ್ರತಿಪಕ್ಷದ ನಾಯಕ ಯಾರನ್ನು ಪ್ರಶ್ನೆ ಕೇಳಬೇಕು ಅಂತ ಹೇಳಿದಾಗ ಮಧ್ಯಪ್ರವೇಶಿಸುವ ಸ್ಪೀಕರ್ ಯುಟಿ ಖಾದರ್, ವಿರೋಧ ಪಕ್ಷದ ನಾಯಕ ಮಾತಾಡುವಾಗ ಅಶ್ವಥ್ ನಾರಾಯಣ ಪದೇಪದೆ ಯಾಕೆ ಎದ್ದು ನಿಂತು ಅಡ್ಡಿಪಡಿಸೋದು ಅಂದಾಗ ಮಲ್ಲೇಶ್ವರಂ ಶಾಸಕ ಪೆಚ್ಚುಮೋರೆ ಹಾಕ್ಕೊಂಡು ಕೂರುತ್ತಾರೆ. ಖರ್ಗೆ ಅವರು ಮಾತು ಮುಂದುವರಿಸುತ್ತಿದ್ದಾಗಲೇ ಸಚಿವ ಕೃಷ್ಣ ಭೈರೇಗೌಡ ಬಂದು ಅವರ ಪಕ್ಕದಲ್ಲಿ ಕೂರುತ್ತಾರೆ. ರೆವೆನ್ಯೂ ಮಿನಿಸ್ಟರ್ ಬಂದಿದ್ದಾರೆ ನೋಡಿ ಅಂತ ಹೇಳಿದಾಗ ಅಶ್ವಥ್ ಏನನ್ನೋ ಹೇಳುತ್ತಾರೆ. ಅದಕ್ಕೆ ಖರ್ಗೆ, ಕಳೆದ ಬೆಳಗಾವಿ ಅಧಿವೇಶನವನ್ನು ಆಗಿನ ಬಿಜೆಪಿ ಸರ್ಕಾರ ಎರಡು ದಿನ ಮುಂಚಿತವಾಗಿಯೇ ಅಂತ್ಯ ಹಾಡಿದ್ದು ಮರೆತು ಹೋಗಿದ್ದು ಮರೆತು ಹೋಗಿದೆಯಾ? ಅಂತ ಅಶ್ವಥ್ ರನ್ನು ಕೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 07, 2023 02:30 PM