LIVE | Revanth Reddy Swearing-In: ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ 

LIVE | Revanth Reddy Swearing-In: ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ 

TV9 Web
| Updated By: ಸಾಧು ಶ್ರೀನಾಥ್​

Updated on:Dec 08, 2023 | 9:51 AM

ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ನೂತನ ಸಚಿವರಾಗಿ ನಾಲಮಾಡ ಉತ್ತಮ್ ಕುಮಾರ್‌ ರೆಡ್ಡಿ, ಸಿ.ದಾಮೋದರ್ ರಾಜಾನರಸಿಂಹ, ಕೊಮಿಟಿರೆಡ್ಡಿ ವೆಂಕಟರೆಡ್ಡಿ, ದುದ್ದಿಲ್ಲ ಶ್ರೀಧರ್‌ ಬಾಬು, ಪೊಂಗುಲೇಟಿ ಶ್ರೀನಿವಾಸರೆಡ್ಡಿ, ಪೊನ್ನಂ ಪ್ರಭಾಕರ್, ಕೊಂಡಾ ಸುರೇಖಾ, ಅನುಸೂಯಾ ಸೀತಕ್ಕ, ತುಮ್ಮಲ ನಾಗೇಶ್ವರರಾವ್‌, ಜೂಪಲ್ಲಿ ಕೃಷ್ಣಾರಾವ್ ಪ್ರಮಾಣವಚನ ಸ್ವೀಕರಿಸಿದರು.

LIVE | Revanth Reddy Swearing-In: ತೆಲಂಗಾಣ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್​ ಶಾಸಕ ಎನುಮುಲ ರೇವಂತ್ ರೆಡ್ಡಿ  ಅವರು ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೊಡಂಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ ಅವರಿಗೆ ಮುಖ್ಯಮಂತ್ರಿಯಾಗಿ ಗವರ್ನರ್‌ ತಮಿಳಿಸೈ ಸೌಂದರರಾಜನ್ ಅವರು ಪ್ರಮಾಣವಚನ ಬೋಧಿಸಿದರು. ಇದೆ ವೇಳೆ, ತೆಲಂಗಾಣದ ಉಪ ಮುಖ್ತಮಂತ್ರಿಯಾಗಿ (ಡಿಸಿಎಂ) ಮಲ್ಲು ಭಟ್ಟಿ ವಿಕ್ರಮಾರ್ಕ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ಆಗಮಿಸಿದ್ದರಿಂದ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಬೆಳಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಕ್ರೀಡಾಂಗಣಕ್ಕೆ ಬರಲಾರಂಭಿಸಿದ್ರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳನ್ನು ರಂಜಿಸಲು 500 ಕಲಾವಿದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಮಧ್ಯಾಹ್ನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ರೇವಂತ್ ರೆಡ್ಡಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಲ್ಕಾಜ್​ಗಿರಿ ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿರುವ ರೇವಂತ್ ರೆಡ್ಡಿ ನಿನ್ನೆ ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ನಿವಾಸದಲ್ಲಿ ಭೇಟಿಯಾದ ನಂತರ ಪ್ರಮಾಣ ವಚನ ಸಮಾರಂಭ ಮತ್ತು ಸಂಪುಟದ ಸ್ಥಾನಗಳ ವಿವರಗಳನ್ನು ಚರ್ಚಿಸಿದ್ದರು.

ಮತ್ತಷ್ಟು ಓದಿ: Revanth Reddy Love Story: ಕೇಂದ್ರ ಸಚಿವರ ಮಗಳನ್ನೇ ಪ್ರೀತಿಸಿ ಮದುವೆಯಾದ ರೇವಂತ್​ ರೆಡ್ಡಿಯ ಪ್ರೇಮ ಕಥೆ ಇಲ್ಲಿದೆ

ನಂತರ ಅವರು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು, ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಿದ್ದರು. ಸಂಸದ ರಾಹುಲ್ ಗಾಂಧಿ ಎಕ್ಸ್​ನಲ್ಲಿ ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಅಭಿನಂದನೆಗಳು, ಅವರ ನಾಯಕತ್ವದಲ್ಲಿ ಕಾಂಗ್ರೆಸ್​ ಸರ್ಕಾರವು ತೆಲಂಗಾಣ ಜನರಿಗೆ ಎಲ್ಲಾ ಭರವಸೆಗಳನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 07, 2023 01:23 PM