AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆ ಸೌಜನ್ಯದ ನಗು: ಸಂಸತ್ತಿನ ಅಂಗಳದಲ್ಲಿ ಮೋದಿ-ಖರ್ಗೆ ಹಸ್ತಲಾಘವ

Video: ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆ ಸೌಜನ್ಯದ ನಗು: ಸಂಸತ್ತಿನ ಅಂಗಳದಲ್ಲಿ ಮೋದಿ-ಖರ್ಗೆ ಹಸ್ತಲಾಘವ

ನಯನಾ ರಾಜೀವ್
|

Updated on: Apr 14, 2026 | 11:54 AM

Share

ಧಾನಿ ನರೇಂದ್ರ ಮೋದಿ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಸಣ್ಣ ಮಾತುಕತೆ ನಡೆಸಿದರು. ಭಾರತದ ರಾಜಕೀಯ ಅಖಾಡದಲ್ಲಿ ಪರಸ್ಪರ ವಾಗ್ದಾಳಿಗಳು ಸಾಮಾನ್ಯ. ಆದರೆ, ಕಳೆದ ಎರಡು ದಿನಗಳಲ್ಲಿ ಸಂಸತ್ತಿನ ಆವರಣದಲ್ಲಿ ಕಂಡುಬಂದ ದೃಶ್ಯಗಳು ಮಾತ್ರ ವಿಭಿನ್ನವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕರ ನಡುವಿನ ಸೌಜನ್ಯದ ನಗು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ನವದೆಹಲಿ, ಏಪ್ರಿಲ್ 14: ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಸಣ್ಣ ಮಾತುಕತೆ ನಡೆಸಿದರು. ಭಾರತದ ರಾಜಕೀಯ ಅಖಾಡದಲ್ಲಿ ಪರಸ್ಪರ ವಾಗ್ದಾಳಿಗಳು ಸಾಮಾನ್ಯ. ಆದರೆ, ಕಳೆದ ಎರಡು ದಿನಗಳಲ್ಲಿ ಸಂಸತ್ತಿನ ಆವರಣದಲ್ಲಿ ಕಂಡುಬಂದ ದೃಶ್ಯಗಳು ಮಾತ್ರ ವಿಭಿನ್ನವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕರ ನಡುವಿನ ಸೌಜನ್ಯದ ನಗು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಎರಡು ದಿನಗಳ ಹಿಂದೆ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿದ್ದರು. ಹತ್ತಿರದಲ್ಲೇ ಹಲವು ಸಚಿವರಿದ್ದರೂ, ಪ್ರಧಾನಿಯವರು ರಾಹುಲ್ ಮುಂದೆ ಸ್ವಲ್ಪ ಹೊತ್ತು ನಿಂತು ಸುದೀರ್ಘವಾಗಿ ಮಾತನಾಡಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ಇಂದು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಸಂಸತ್ತಿನ ‘ಪ್ರೇರಣಾ ಸ್ಥಳ’ದಲ್ಲಿ ಗಣ್ಯರು ಜಮಾಯಿಸಿದ್ದರು. ಪ್ರಧಾನಿ ಮೋದಿ ಕೆಲವು ನಿಮಿಷಗಳ ಕಾಲ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದರು, ರಾಜಕೀಯವಾಗಿ ಟೀಕಿಸುವ ಪ್ರಧಾನಿಯವರ ಆಪ್ತ ಮಾತುಗಳು ಅಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ರಾಜಕೀಯ ಸಿದ್ಧಾಂತಗಳು ಏನೇ ಇರಲಿ, ಸಂಸತ್ತಿನ ಅಂಗಳದಲ್ಲಿ ಈ ದೇಶದ ನಾಯಕರು ತೋರಿದ ಈ ಸಭ್ಯತೆ ಮತ್ತು ಸೌಜನ್ಯ ಭಾರತೀಯ ಪ್ರಜಾಪ್ರಭುತ್ವದ ಅಸಲಿ ಶಕ್ತಿಯನ್ನು ಎತ್ತಿ ತೋರಿಸುವಂತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us