Karnataka Assembly Polls; ರಾಜಕಾರಣದ ಉದ್ದೇಶದಿಂದ ಕಿಚ್ಚ ಸುದೀಪರನ್ನು ಭೇಟಿಯಾಗಿರಲಿಲ್ಲ, ನಮ್ಮ ನಡುವೆ ಉತ್ತಮ ಸ್ನೇಹವಿದೆ: ಡಿಕೆ ಶಿವಕುಮಾರ್
ಕಲಾವಿದರಿಗೆ ಅವರದ್ದೇ ಆದ ಆದ್ಯತೆಗಳಿರುತ್ತವೆ. ಹಾಗಾಗಿ, ಸುದೀಪ ಬಿಜೆಪಿಗೆ ಸಪೋರ್ಟ್ ಮಾಡಬಯಿಸಿದರೆ ಅದರಲ್ಲಿ ತಮಗೆ ತಪ್ಪೇನೂ ಕಾಣದು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ್ (Kiccha Sudeep) ಬಿಜೆಪಿಗೆ ಬೆಂಬಲ ಸೂಚಿಸಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮಾಡುವುದಾಗಿ ಹೇಳಿದ್ದು ಭಾರೀ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಗೆ ಹೈಕಮಾಂಡ್ ನಿಂದ ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ (Siddaramaiah) ಮತ್ತು ಇತರ ನಾಯಕರೊಂದಿಗೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸುದೀಪ್ ಬೆಂಬಲ ಕುರಿತು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಅನ್ಯಮನಸ್ಕತೆಯಿಂದ ಉತ್ತರಿಸಿದ ಶಿವಕುಮಾರ್, ಅವರೊಬ್ಬ ಕಲಾವಿದರು ಮತ್ತು ಅವರಿಗೆ ಆದ್ಯತೆಗಳಿರುತ್ತವೆ. ಹಾಗಾಗಿ, ಅವರು ಬಿಜೆಪಿಗೆ ಸಪೋರ್ಟ್ ಮಾಡಬಯಿಸಿದರೆ ಅದರಲ್ಲಿ ತಮಗೆ ತಪ್ಪೇನೂ ಕಾಣದು ಎಂದರು. ತಮ್ಮ ಮತ್ತು ಸುದೀಪ ನಡುವೆ ಉತ್ತಮ ಸ್ನೇಹ ಮತ್ತು ಬಾಂಧವ್ಯಗಳಿವೆ, ಆ ಹಿನ್ನೆಲೆಯಲ್ಲೇ ಅವರನ್ನು ಬೆಂಗಳೂರಲ್ಲಿ ಭೇಟಿಯಾಗಿದ್ದು, ಅದರ ಹಿಂದೆ ರಾಜಕೀಯದ ಉದ್ದೇಶವಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 05, 2023 04:50 PM
Latest Videos