Watch Video: ಮಿಸ್ಟರ್ ಬೀಸ್ಟ್ 7 ದಿನಗಳ ಕಾಲ ಜೀವಂತ ಸಮಾಧಿಯಾಗಿದ್ದ ಸ್ಟಂಟ್ ಮಾಡಿದ್ದಾನೆ, ಅದು ನಿಜಕ್ಕೂ ಮಾನಸಿಕ ತೊಳಲಾಟವಂತೆ!
ಸೂಟ್ ಧರಿಸಿದ್ದ ಮಿಸ್ಟರ್ ಬೀಸ್ಟ್ ಸೆಲೆಬ್ರಿಟಿಯನ್ನು ಮೊದಲು ಅತ್ಯಾಧುನಿಕ ಪಾರದರ್ಶಕ ಶವಪೆಟ್ಟಿಗೆಯಲ್ಲಿ ನೆಲದೊಳಕ್ಕೆ ಬಿಡಲಾಯಿತು. ಈ ಭೂಗತ ಪ್ರಯಾಣವನ್ನು ಪ್ರಾರಂಭಿಸಲು ಆಹಾರ ಮತ್ತು ನೀರು ಪೂರೈಕೆ ವ್ಯವಸ್ಥೆಗೊಳಿಸಲಾಯಿತು. ಶವಪೆಟ್ಟಿಗೆಯಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಕ್ಯಾಮೆರಾಗಳನ್ನು ಇಡಲಾಗಿತ್ತು.
ಮಿಸ್ಟರ್ ಬೀಸ್ಟ್ ಎಂಬ ಖ್ಯಾತ ಯೂಟ್ಯೂಬರ್ 7 ದಿನಗಳ ಕಾಲ ಜೀವಂತ ಸಮಾಧಿಯಾಗಿದ್ದ ಸ್ಟಂಟ್ ಮಾಡಿದ್ದಾನೆ, ಆತನ ಈ ಸಾಹಸವು ಸ್ವಯಂಪ್ರೇರಿತವಾಗಿದ್ದರೂ, ಆತ ಸಮಾಧಿಯ ಕ್ಯಾಸ್ಕೆಟ್‌ನಿಂದ ಹೊರಬರುವಾಗ ಸೇರಿದಂತೆ ಆ 7 ದಿನಗಳ ಸಮಾಧಿ ಸ್ಥಿತಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಾನೆ. ಅದು ನಿಜಕ್ಕೂ ಮಾನಸಿಕ ತೊಳಲಾಟವಂತೆ ಎಂದು ಗೋಳಾಡಿದ್ದಾನೆ.
ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ (MrBeast) ಎಂಬಾತನನ್ನು ಏಳು ದಿನಗಳ ಕಾಲ ಶವಪೆಟ್ಟಿಗೆಯೊಳಗೆ ಮುಚ್ಚಲಾಗಿತ್ತು. ಆ ದುರ್ಗಮ ಸಾಹಸದಲ್ಲಿ ಭೂಗತವಾಗಿ ಶವಪೆಟ್ಟಿಗೆಯನ್ನು ಹೂಳಲಾಗಿತ್ತು. ಮನುಷ್ಯನನ್ನು ಬದುಕಿದ್ದಾಗಲೇ ಸಮಾಧಿ ಮಾಡುವುದಾ? ಆ ಆಲೋಚನೆ ಮಾಡಿದರೇನೇ ಸಾಕು ಹೆಚ್ಚಿನ ಜನರ ಬೆನ್ನುಮೂಳೆಯಲ್ಲಿ ನಡುಕ ಉಂಟಾಗುತ್ತದೆ.
ಈ ಕಥಾನಕದ ಹೀರೋನ ನಿಜವಾದ ಹೆಸರು ಜಿಮ್ಮಿ ಡೊನಾಲ್ಡ್ಸನ್, ತನ್ನ 212 ಮಿಲಿಯನ್ ಯೂಟ್ಯೂಬ್ ಚಂದಾದಾರರನ್ನು ಮೆಚ್ಚಿಸಲು, ಮನರಂಜಿಸಲು ಭೂಗತ ಶವಪೆಟ್ಟಿಗೆಯಲ್ಲಿ ಒಂದು ವಾರ ಕಳೆದುಬಂದಿದ್ದಾನೆ ಈತ. ಈ ಸಾಹಸವು ತನಗೆ “ಮಾನಸಿಕ ಸಂಕಟ”ವನ್ನು ಉಂಟುಮಾಡಿದೆ ಎಂದು ಆತ ಹೇಳಿಕೊಂಡಿದ್ದಾನೆ. ಜೊತೆಗೆ ಯಾರೂ ಇಂತಹ ಸಾಹಸವನ್ನು ಪ್ರಯತ್ನಿಸಬೇಡಿ ಎಂದು ಆತ ತನ್ನ ಅನುಯಾಯಿಗಳಲ್ಲಿ ಖೇಲಿಕೊಂಡಿದ್ದಾನೆ.
ಸೂಟ್ ಧರಿಸಿದ್ದ ಮಿಸ್ಟರ್ ಬೀಸ್ಟ್ ಸೆಲೆಬ್ರಿಟಿಯನ್ನು ಮೊದಲು ಅತ್ಯಾಧುನಿಕ ಪಾರದರ್ಶಕ ಶವಪೆಟ್ಟಿಗೆಯಲ್ಲಿ ನೆಲದೊಳಕ್ಕೆ ಬಿಡಲಾಯಿತು. ಈ ಭೂಗತ ಪ್ರಯಾಣವನ್ನು ಪ್ರಾರಂಭಿಸಲು ಆಹಾರ ಮತ್ತು ನೀರು ಪೂರೈಕೆ ವ್ಯವಸ್ಥೆಗೊಳಿಸಲಾಯಿತು. ಶವಪೆಟ್ಟಿಗೆಯಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಕ್ಯಾಮೆರಾಗಳನ್ನು ಇಡಲಾಗಿತ್ತು.
ಯೂಟ್ಯೂಬರ್ ತನ್ನ ಸ್ನೇಹಿತರೊಂದಿಗೆ ಶವಪೆಟ್ಟಿಗೆಯ ಮೇಲೆ 20,000 ಪೌಂಡ್‌ಗಳಷ್ಟು ಮಣ್ಣನ್ನು ಹಾಕಲು ಅಗೆಯುವ ಯಂತ್ರವನ್ನು ಬಳಸಿದನು. ಅದು ಭೂ ಮೇಲ್ಮೈಗಿಂತ ಕೆಳಗಿದೆ ಎಂದು ಖಚಿತಪಡಿಸಲಾಯಿತು. ಮಿಸ್ಟರ್ ಬೀಸ್ಟ್, “ಮುಂದಿನ ಏಳು ದಿನಗಳವರೆಗೆ ನನ್ನ ಜೀವನವನ್ನು ಈ ಶವಪೆಟ್ಟಿಗೆಗೆ ಒಪ್ಪಿಸುತ್ತಿದ್ದೇನೆ” ಎಂದು ವೀಡಿಯೊದಲ್ಲಿ ಹೇಳಿದ್ದ. ಭೂಮಿಯ ಮೇಲ್ಮೈನಲ್ಲಿದ್ದ ತನ್ನ ತಂಡದೊಂದಿಗೆ ಸಂವಹನ ನಡೆಸಲು ಆತ ವಾಕಿ-ಟಾಕಿಯನ್ನು ಬಳಸಿದ್ದ.
ಸುರಕ್ಷತಾ ಮುನ್ನೆಚ್ಚರಿಕೆಗಳ ಹೊರತಾಗಿಯೂ ಡೇರ್ ಡೆವಿಲ್ ಮಿಸ್ಟರ್ ಬೀಸ್ಟ್ ಏಳು ದಿನಗಳ ಕಾಲ ದಣಿದಿರುವಂತೆ ಕಂಡುಬಂದಿದೆ. ಸಾಹಸವು ಸ್ವಯಂಪ್ರೇರಿತವಾಗಿದ್ದರೂ, ಆತ ಸಮಾಧಿಯ ಕ್ಯಾಸ್ಕೆಟ್‌ನಿಂದ ಹೊರಬರುವಾಗ ಸೇರಿದಂತೆ ಆ 7 ದಿನಗಳ ಸಮಾಧಿ ಸ್ಥಿತಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕಣ್ಣೀರು ಹಾಕಿದ್ದಾನೆ. ಇನ್ನೊಂದು ಚಿಂತೆಯೆಂದರೆ, ಒಂದು ಚಿಕ್ಕ ಪ್ರದೇಶದಲ್ಲಿ ಇಷ್ಟು ಸಮಯ ಕಳೆದ ನಂತರ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ ಮತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಅದೃಷ್ಟವಶಾತ್ ಅವರು ಯಾವುದೇ ಗಾಯವನ್ನು ಅನುಭವಿಸದೆ, ಸಂಕ್ಷಿಪ್ತ ಬಂಧನದಿಂದ ಬದುಕುಳಿದುಬಂದಿದ್ದಾರೆ.,
ಏತನ್ಮಧ್ಯೆ, MrBeast 2021 ರಲ್ಲಿ $ 54 ಮಿಲಿಯನ್ ಗಳಿಸಿದ್ದರು. ಅವರು ವರದಿಯ ಪ್ರಕಾರ ಅವರು ತಿಂಗಳಿಗೆ ಸುಮಾರು $5 ಮಿಲಿಯನ್ ಗಳಿಸುತ್ತಾರೆ, ಫೋರ್ಬ್ಸ್ ಪ್ರಕಾರ YouTube ನ ಅತಿ ಹೆಚ್ಚು ಸಂಭಾವನೆ ಪಡೆಯುವ ಕಂಟೆಂಟ್ ರಚನೆಕಾರ ಇವರಾಗಿದ್ದಾರೆ. 2012 ರಿಂದ ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದರೂ, 2018 ರಲ್ಲಿ MrBeast ಪ್ರಸಿದ್ಧಿಗೆ ಬಂದರು.