ಅಸಲಿಗೆ ಪ್ರಜ್ವಲ್ ರೇವಣ್ಣ ನಮ್ಮ ಅಭ್ಯರ್ಥಿಯೇ ಅಲ್ಲ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಂಸದ: ಆರ್ ಅಶೋಕ
ಆದರೆ, ಈ ಬಾರಿ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಹಮತದೊಂದಿಗೆ ಪ್ರಜ್ವಲ್ ರನ್ನು ಹಾಸನದಿಂದ ಸ್ಪರ್ಧೆಗಿಳಿಸಿ ಪ್ರಚಾರ ಮಾಡಿದ್ದರು. ಪ್ರಜ್ವಲ್ ನಾಮಪತ್ರ ಸಲ್ಲಿಸುವಾಗ ರಾಜ್ಯ ಬಿಜೆಪಿ ಅಧ್ಯಕ್ಷ ಸೇರಿದಂತೆ ರಾಜ್ಯದ ಹಲವಾರು ನಾಯಕರಿದ್ದರು ಈಗ ನೋಡಿದರೆ, ಅಶೋಕ ಅವರು ಪ್ರಜ್ವಲ್ ನಮ್ಮ ಕ್ಯಾಂಡಿಡೇಟೇ ಅಲ್ಲ ಅನ್ನುತ್ತಾ ಕೈ ತೊಳೆದುಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿ: ಇದು ಪಲಾಯನವಾದವಲ್ಲದೆ ಮತ್ತೇನೂ ಅಲ್ಲ ಸ್ವಾಮಿ. ಹುಬ್ಳಳ್ಳಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ (R Ashoka) ಅವರು ಪ್ರಜ್ವಲ್ ರೇವಣ್ಣ (Prajwal Revanna) ತಮ್ಮ ಜೆಡಿಎಸ್-ಬಿಜೆಪಿ ಮೈತ್ರಿಕೂಟದ (BJP-JDS alliance) ಅಭ್ಯರ್ಥಿಯೇ ಅಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದರು. ಅವರಿಗೆ ನಾವು ಟಿಕೆಟ್ ಕೊಟ್ಟಿಲ್ಲ, 2019ರಲ್ಲಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸಂಸತ್ತಿಗೆ ಆಯ್ಕೆಯಾಗಿದ್ದರು, ಹಾಗಾಗಿ ಪ್ರಜ್ವಲ್ ರೇವಣ್ಣ ಈಗಲೂ ಅದೇ ಮೈತ್ರಿಕೂಟದ ಸಂಸದ ಎಂದು ಹೇಳಿದರು. ಅದು ಸರಿ, 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಸನ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಸ್ಪರ್ಧೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಮತ್ತು ಬಿಜೆಪಿಯ ಎ ಮಂಜು ನಡುವೆ ಇತ್ತು. ಆದರೆ, ಈ ಬಾರಿ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಹಮತದೊಂದಿಗೆ ಪ್ರಜ್ವಲ್ ರನ್ನು ಹಾಸನದಿಂದ ಸ್ಪರ್ಧೆಗಿಳಿಸಿ ಪ್ರಚಾರ ಮಾಡಿದ್ದರು. ಪ್ರಜ್ವಲ್ ನಾಮಪತ್ರ ಸಲ್ಲಿಸುವಾಗ ರಾಜ್ಯ ಬಿಜೆಪಿ ಅಧ್ಯಕ್ಷ ಸೇರಿದಂತೆ ರಾಜ್ಯದ ಹಲವಾರು ನಾಯಕರಿದ್ದರು ಈಗ ನೋಡಿದರೆ, ಅಶೋಕ ಅವರು ಪ್ರಜ್ವಲ್ ನಮ್ಮ ಕ್ಯಾಂಡಿಡೇಟೇ ಅಲ್ಲ ಅನ್ನುತ್ತಾ ಕೈ ತೊಳೆದುಕೊಳ್ಳುತ್ತಿದ್ದಾರೆ. ಒಂದು ಪಕ್ಷ ಅವರು ಈ ಚುನಾವಣೆಯಲ್ಲಿ ಅಯ್ಕೆಯಾದರೆ ತಮ್ಮ ಸಂಸದನಾಗುತ್ತಾರೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರ್ಕಾರ ಪಾಪರ್ ಆಗಿರುವುದರಿಂದ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ: ಆರ್ ಅಶೋಕ