ಕಬ್ಬು ಅರೆದು ಹಾಲು ತೆಗೆದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

| Updated By: ವಿವೇಕ ಬಿರಾದಾರ

Updated on: Jan 14, 2024 | 2:41 PM

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇದೇ ಜನವರಿ‌ 12 ರಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ರಾಯಚೂರು-ಮಂತ್ರಾಲಯ ಮಾರ್ಗ ಮಧ್ಯೆ ಕಬ್ಬಿನ ಹಾಲಿನ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅಂಗಡಿಯಲ್ಲಿ ಖುದ್ದು ತಾವೇ ಮಷಿನ್​ಗೆ ಕಬ್ಬು ಹಾಕಿ, ಹಾಲು ತೆಗೆದಿದ್ದಾರೆ.

ರಾಯಚೂರು, ಜನವರಿ 14: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಇದೇ ಜನವರಿ‌ 12 ರಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ರಾಯಚೂರು-ಮಂತ್ರಾಲಯ ಮಾರ್ಗ ಮಧ್ಯೆ ಕಬ್ಬಿನ ಹಾಲಿನ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅಂಗಡಿಯಲ್ಲಿ ಖುದ್ದು ತಾವೇ ಮಷಿನ್​ಗೆ ಕಬ್ಬು ಹಾಕಿ, ಹಾಲು ತೆಗೆದಿದ್ದಾರೆ. ಪ್ರಹ್ಲಾದ್​ ಜೋಶಿ ಅವರು ಕಬ್ಬಿನಿಂದ ಹಾಲು ತೆಗೆಯುವ ಸನ್ನಿವೇಶ ಮೊಬೈಲ್​​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಲ್ಲದೇ ಖುದ್ದು ಪ್ರಹ್ಲಾದ್​ ಜೋಶಿ ಅವರೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್​​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ವಿದೇಶಿ ಪಾನೀಯಗಳ ಬದಲು ನಮ್ಮ ದೇಶದ ಸ್ವಾದ ಕಬ್ಬಿನ ಹಾಲು ಬಲು ಚಂದ” ಎಂದು ಕ್ಯಾಪ್ಶನ್​​ ಬೆರೆದಿದ್ದಾರೆ. ಇದಕ್ಕೆ ನೆಟ್ಟಿಗರು “ವಿದೇಶಿ ಪಾನೀಯಗಿಂತ ದೇಶಿ ಪಾನೀಯಕ್ಕೆ ಒತ್ತು ನೀಡಿ” ಅಂತ ಪ್ರಹ್ಲಾದ್​ ಜೋಶಿ ಅವರು ಸಂದೇಶ ಸಾರಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ.