ಪ್ರತಾಪ್ ಸಿಂಹನೇನು ದೊಡ್ಡ ರಾಷ್ಟ್ರೀಯ ನಾಯಕನೇ ಸಿದ್ದರಾಮಯ್ಯ ಟಾರ್ಗೆಟ್ ಮಾಡಲು? ಯತೀಂದ್ರ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹರನ್ನು ಟಾರ್ಗೆಟ್ ಮಾಡಿದರೆ ಅದು ಹೇಗೆ ತನಗೆ ರಾಜಕೀಯ ಲಾಭ ತಂದುಕೊಡುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ, ಪಕ್ಷ ಟಿಕೆಟ್ ನೀಡಿದರೆ ಖಂಡಿತ ಸ್ಪರ್ಧಿಸುವುದಾಗಿ ಅವರು ಹೇಳಿದರು.
ಮೈಸೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಬಿಜೆಪಿ ಮತ್ತು ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡಹೊರಟ್ಟಿದ್ದಾರೆಂದು ನೀಡಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುಟುಂಬ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ಟಾರ್ಗೆಟ್ ಮಾಡೋದಿಕ್ಕೆ ಪ್ರತಾಪ್ ಸಿಂಹರೇನು ರಾಷ್ಟ್ರೀಯ ನಾಯಕರೇ? ತನ್ನ ತಂದೆ ಸಿದ್ದರಾಮಯ್ಯ ತಮ್ಮ 45 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ತಮಗೆ ಮೋಸ ಮಾಡಿದವರ ವಿರುದ್ಧವೂ ಸುಳ್ಳು ಆರೋಪ ಹೊರಿಸಿಲ್ಲ ಮತ್ತು ರಾಜಕೀಯ ಹಗೆ ಸಾಧಿಸಿಲ್ಲ. ಅಂಥದ್ದರಲ್ಲಿ ಪ್ರತಾಪ್ ಸಿಂಹರನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ?ಎಂದು ಹೇಳಿದರು. ಮೈಲೇಜ್ ಗಿಟ್ಟಿಸಿಕೊಳ್ಳಲು ಸಂಸದ ಹಾಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರ ಸಹೋದರ ತಪ್ಪು ಮಾಡಿದ್ದಾರೆ, ಆ ಕಾರಣಕ್ಕಾಗೇ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಯತೀಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ