ವ್ಯಕ್ತಿಯ ಸಾವಿನ ಬಳಿಕ ಆತ ಮಲಗಿದ್ದ ಆಸ್ಪತ್ರೆಯ ರಕ್ತಸಿಕ್ತ ಹಾಸಿಗೆಯ ಗರ್ಭಿಣಿ ಪತ್ನಿಯಿಂದಲೇ ಸ್ವಚ್ಛಗೊಳಿಸಿದ ಸಿಬ್ಬಂದಿ
ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಗರ್ಭಿಣಿಯಿಂದ ಆತ ಮಲಗಿದ್ದ ಆಸ್ಪತ್ರೆಯ ರಕ್ತಸಿಕ್ತ ಹಾಸಿಗೆಯನ್ನು ಸ್ವಚ್ಛ ಮಾಡಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಒಂದೊಡೆ ಆಕೆ ಗರ್ಭಿಣಿ ಕೆಲವೇ ತಿಂಗಳುಗಳಲ್ಲಿ ಮುದ್ದಾದ ಮಗುವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದರು.

ಆದರೆ ದುರಾದೃಷ್ಟವೆಂಬಂತೆ ಅಪಘಾತದಲ್ಲಿ ಅವರ ಪತಿ ನಿಧನ ಹೊಂದಿದ್ದಾರೆ. ಅಪಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸಿದ್ದು, ಪತಿ ಮಲಗಿದ್ದ ರಕ್ತಸಿಕ್ತವಾದ ಹಾಸಿಗೆಯನ್ನು ಆಕೆಯ ಕೈಯಿಂದಲೇ ಸ್ವಚ್ಛಗೊಳಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ