‘ಕೆಡಿ’ ಸಿನಿಮಾನಲ್ಲಿ ರವಿಚಂದ್ರನ್, ರಮೇಶ್ ಪಾತ್ರವೇನು: ಪ್ರೇಮ್ ಹೇಳಿದ್ದು ಹೀಗೆ

‘ಕೆಡಿ’ ಸಿನಿಮಾನಲ್ಲಿ ರವಿಚಂದ್ರನ್, ರಮೇಶ್ ಪಾತ್ರವೇನು: ಪ್ರೇಮ್ ಹೇಳಿದ್ದು ಹೀಗೆ

Updated on: May 26, 2024 | 4:38 PM

ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾ ಅಪ್ಪಟ ರೌಡಿಸಂ ಕತೆಯಾಗಿದ್ದು, ಈ ಸಿನಿಮಾನಲ್ಲಿ ರಮೇಶ್ ಅರವಿಂದ್ ಹಾಗೂ ರವಿಚಂದ್ರನ್ ಸಹ ನಟಿಸಿದ್ದಾರೆ. ಸಿನಿಮಾನಲ್ಲಿ ರಮೇಶ್-ರವಿಚಂದ್ರನ್ ಪಾತ್ರಗಳು ಹೇಗಿರಲಿವೆ ಎಂಬ ಪ್ರಶ್ನೆ ಪ್ರೇಮ್​ಗೆ ಎದುರಾಗಿದೆ.

ಪ್ರೇಮ್ (Prem) ನಿರ್ದೇಶನ ಮಾಡಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾನಲ್ಲಿ ದೊಡ್ಡ ತಾರಾಗಣವಿದೆ. ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳ ಜೊತೆಗೆ ಬಾಲಿವುಡ್ ಹಾಗೂ ಇತರೆ ಚಿತ್ರರಂಗದ ನಟರು ಸಹ ಇದ್ದಾರೆ. ನಟ ರವಿಚಂದ್ರನ್, ರಮೇಶ್ ಅರವಿಂದ್ ಅವರುಗಳು ಸಹ ಈ ಗ್ಯಾಂಗ್​ಸ್ಟರ್ ಸಿನಿಮಾದ ಪಾತ್ರವಾಗಿದ್ದಾರೆ. ಇಂದು ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೇಮ್​ಗೆ ಇವರಿಬ್ಬರ ಪಾತ್ರಗಳ ಕುರಿತಾಗಿ ಪ್ರಶ್ನೆ ಎದುರಾಯ್ತು. ಪ್ರಶ್ನೆಗೆ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ ಪ್ರೇಮ್. ಅಂದಹಾಗೆ ‘ಕೆಡಿ’ ಸಿನಿಮಾನಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More