ಓಂ ಪ್ರಕಾಶ್ ರಾವ್ ನನ್ನ ಗುರುಗಳು: ಹೆಮ್ಮೆಯಿಂದ ಹೇಳಿದ ‘ಪ್ರೇಮದ ಊರಲಿ’ ಡೈರೆಕ್ಟರ್
ನಿರ್ದೇಶಕ ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಅವರನ್ನು ರಂಗಾಯಣ ರಘು ಆಲಿಂಗಿಸಿಕೊಂಡರು. ಆಗ ಓಂ ಪ್ರಕಾಶ್ ರಾವ್ ಅವರ ಬಗ್ಗೆ ವಿಷಯ ಪ್ರಸ್ತಾಪ ಆಯಿತು. ವಿಡಿಯೋ ಇಲ್ಲಿದೆ ನೋಡಿ..
ನಿರ್ದೇಶಕ ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಹಿರಿಯ ನಟ ರಂಗಾಯಣ ರಘು ಕಾಲಿಗೆ ಬಿದ್ದು ಧನ್ಯವಾದ ತಿಳಿಸಿದರು. ಈ ವೇಳೆ ಭಾವುಕರಾದ ಅವರನ್ನು ರಂಗಾಯಣ ರಘು ಆಲಿಂಗಿಸಿಕೊಂಡರು. ಆಗ ಓಂ ಪ್ರಕಾಶ್ ರಾವ್ ಅವರ ಬಗ್ಗೆ ವಿಷಯ ಪ್ರಸ್ತಾಪ ಆಯಿತು. ‘ನನಗೆ ಈ ಯಶಸ್ಸು ಸಿಗಲು ನನ್ನ ಗುರುಗಳಾದ ಓಂ ಪ್ರಕಾಶ್ ರಾವ್ ಅವರು ಕಲಿಸಿಕೊಟ್ಟ ಕೆಲಸವೇ ಕಾರಣ. ಅವರ ಜೊತೆ 6 ವರ್ಷ ಕೆಲಸ ಮಾಡಿದ್ದೇನೆ. ಎಲ್ಲ ವಿಭಾಗದಲ್ಲಿ ಕೆಲಸ ಇಷ್ಟು ಚೆನ್ನಾಗಿ ಮೂಡಿಬರಲು ಕಾರಣವಾದ ಶಕ್ತಿಯೇ ಅವರು. ಅವರು ಹೊಡೆಯುತ್ತಿದ್ದರು, ಬಯ್ಯುತ್ತಿದ್ದರು. ಅದು ಈಗ ಚಪ್ಪಾಳೆಯಾಗಿ ಕೇಳಿಸುತ್ತಿದೆ. ಅವರು ಹೊರಗಡೆ ಬಯ್ಯುವುದು ಮಾತ್ರ ಎಲ್ಲರಿಗೂ ಕಾಣಿಸುತ್ತದೆ. ಆದರೆ ಅವರು ಪ್ರೀತಿಯಿಂದ ಕೆಲಸ ಹೇಳಿಕೊಡುವುದು ಎಲ್ಲಿಯೂ ಕಾಣಿಸಲ್ಲ. ಹೊರಗಡೆಯಿಂದ ಬಂದ ನನಗೆ ಮೊದಲ ಸಿನಿಮಾದಲ್ಲೇ ಪ್ರಶಸ್ತಿ ಸಿಗುತ್ತದೆ ಎಂದರೆ ಅದನ್ನು ಕಲಿಸಿಕೊಟ್ಟಿದ್ದೇ ನಮ್ಮ ಗುರುಗಳು. ಪ್ರೇಮದ ಊರಲಿ ಚಿತ್ರದಲ್ಲಿ ಎಮೋಷನಲ್ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ ಎಂದರೆ ಅದು ನನಗೆ ಓಂ ಪ್ರಕಾಶ್ ರಾವ್ ಅವರು ಕಲಿಸಿಕೊಟ್ಟಿದ್ದು. ಅದಕ್ಕೆ ಅವರಿಗೆ ಧನ್ಯವಾದಗಳು’ ಎಂದು ಮನೋಜ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
