ಬೆಂಕಿ ಹೊತ್ತಿಕೊಂಡು ಧಗಧಗಿಸಿದ ಖಾಸಗಿ ಬಸ್​​: ಅಕ್ಕ ಪಕ್ಕದಲ್ಲಿದ್ದ ವಾಹನಗಳಿಗೂ ಹಾನಿ

Edited By:

Updated on: Feb 18, 2026 | 12:12 PM

ಬೆಂಗಳೂರಿನ ಚಂದ್ರಾಲೇಔಟ್‌ನ ಬಿಎಂಟಿಸಿ ಡಿಪೋ ಬಳಿ ಖಾಸಗಿ ಬಸ್ ಒಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಬೆಂಕಿಯಿಂದ ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ ಮತ್ತು ಅಕ್ಕಪಕ್ಕದ ವಾಹನಗಳಿಗೂ ಬೆಂಕಿ ಹಬ್ಬಿದೆ. ಬೆಂಕಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಬೆಂಗಳೂರೂ, ಫೆಬ್ರವರಿ 18: ನಗರದ ಚಂದ್ರಾಲೇಔಟ್​ನ ಬಿಎಂಟಿಸಿ ಡಿಪೋ ಬಳಿ ಖಾಸಗಿ ಬಸ್​ವೊಂದು ಹೊತ್ತಿ ಉರಿದಿದೆ. ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ. ಬೆಂಕಿಯ ಜ್ವಾಲೆ ಬಸ್‌ನ ಅಕ್ಕಪಕ್ಕ ನಿಲ್ಲಿಸಿದ್ದ ಇತರ ವಾಹನಗಳಿಗೂ ಹಬ್ಬಿ, ಅವಕ್ಕೂ ಹಾನಿಯಾಗಿವೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ ಹೊತ್ತಿ ಉರಿಯಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 18, 2026 12:11 PM