ಆನ್​​ಲೈನ್​​ ತರಗತಿಗೆ ಅಪಸ್ವರ: ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ

Edited By:

Updated on: May 12, 2026 | 2:15 PM

ಖಾಸಗಿ ಶಾಲಾ ಒಕ್ಕೂಟವು ಆನ್‌ಲೈನ್ ಶಿಕ್ಷಣದ ಕುರಿತು ಪ್ರಧಾನ ಮಂತ್ರಿಗಳ ಸಲಹೆಯನ್ನು ಖಂಡಿಸಿದೆ. ಕೋವಿಡ್ ಸಮಯದಲ್ಲಿ ಆನ್‌ಲೈನ್ ಶಿಕ್ಷಣದಿಂದ ಮಕ್ಕಳಿಗೆ ಆದ ಹಾನಿ, ಕಲಿಕೆಯ ಗುಣಮಟ್ಟ ಕುಸಿತವನ್ನು ನೆನಪಿಸಿರುವ ಸಂಘಟನೆ, ಶಾಲಾ ಶಿಕ್ಷಣಕ್ಕೆ ಭೌತಿಕ ತರಗತಿಗಳು ಅತ್ಯಗತ್ಯ. ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿ. ಆನ್‌ಲೈನ್ ಶಿಕ್ಷಣವು ಶಾಲಾ ಮಕ್ಕಳಿಗೆ ಸೂಕ್ತವಲ್ಲ ಎಂದು ವಾದಿಸಿದೆ.

ಬೆಂಗಳೂರು, ಮೇ 12: ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡುವ ಪ್ರಧಾನ ಮಂತ್ರಿಗಳ ಇತ್ತೀಚಿನ ಹೇಳಿಕೆಯನ್ನು ಖಾಸಗಿ ಶಾಲಾ ಒಕ್ಕೂಟ ಖಂಡಿಸಿದೆ. ಶಾಲಾ ಶಿಕ್ಷಣದಲ್ಲಿ ಭೌತಿಕ ತರಗತಿಗಳು ಅತ್ಯಗತ್ಯ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ 500 ದಿನಗಳ ಕಾಲ ಮಕ್ಕಳಿಗೆ ಆದ ಕಲಿಕೆಯ ನಷ್ಟ ಮತ್ತು ಅನ್ಯಾಯವನ್ನು ಸರಿಪಡಿಸಲು ಇಂದಿಗೂ ಸಾಧ್ಯವಾಗಿಲ್ಲ. ಶಾಲಾ ಶಿಕ್ಷಣದಲ್ಲಿ ಆನ್‌ಲೈನ್ ವ್ಯವಸ್ಥೆಯು ಭೌತಿಕ ತರಗತಿಗಳಿಗೆ ಪರ್ಯಾಯವಲ್ಲ. ಕಲಿಕೆಯ ವಿಧಾನಕ್ಕೆ ಭೌತಿಕ ತರಗತಿಗಳು ಅನಿವಾರ್ಯವಾಗಿವೆ. ಆನ್‌ಲೈನ್ ಶಿಕ್ಷಣವು ಹೆಚ್ಚುವರಿ ಅಥವಾ ಉನ್ನತ ಶಿಕ್ಷಣಕ್ಕೆ ಅನ್ವಯವಾಗಬಹುದಾದರೂ, ಶಾಲಾ ಶಿಕ್ಷಣಕ್ಕೆ ಇದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More