ಸರ್ ಎಂ ವಿಶ್ವೇಶ್ವರಯ್ಯರಂಥ ಮಹಾನ್ ಆರ್ಕಿಟೆಕ್ಟ್​ರನ್ನು ದೇಶಕ್ಕೆ ನೀಡಿದ ಮುದ್ದೇನಹಳ್ಳಿಯ ಪುಣ್ಯಭೂಮಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ಸರ್ ಎಂ ವಿಶ್ವೇಶ್ವರಯ್ಯರಂಥ ಮಹಾನ್ ಆರ್ಕಿಟೆಕ್ಟ್​ರನ್ನು ದೇಶಕ್ಕೆ ನೀಡಿದ ಮುದ್ದೇನಹಳ್ಳಿಯ ಪುಣ್ಯಭೂಮಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 25, 2023 | 5:06 PM

ಮುದ್ದೇನಹಳ್ಳಿ ಸತ್ಯಸಾಯಿ ಮಧುಸೂದನ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಚಿಕ್ಕಬಳ್ಳಾಪುರ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮುದ್ದೇನಹಳ್ಳಿ ಸತ್ಯಸಾಯಿ ಮಧುಸೂದನ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಎಂದಿನಂತೆ ಕನ್ನಡದಲ್ಲೇ (Kannada) ಭಾಷಣ ಆರಂಭಿಸಿದರು. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯು ಎಸ್ ಎಂ ವಿಶ್ವೇಶ್ವರಯ್ಯ (Sir M Visvesvaraya) ರೂಪದಲ್ಲಿ ಭಾರತಕ್ಕೆ ಒಬ್ಬ ಮಹಾನ್ ಇಂಜಿನೀಯರ್ ರನ್ನು ನೀಡಿದ ಪುಣ್ಯ ಭೂಮಿ, ಇಲ್ಲಿಗೆ ಭೇಟಿ ನೀಡಿ ಅವರ ಸಮಾಧಿ ಮತ್ತು ವಸ್ತು ಸಂಗ್ರಹಾಲಯ ಸಂದರ್ಶಿಸುವ ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಈ ಪುಣ್ಯಭೂಮಿಗೆ ತಾವು ತಲೆಬಾಗಿ ನಮಸ್ಕರಿಸುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 25, 2023 01:30 PM