‘ಜೇಮ್ಸ್’ ಸಿನಿಮಾ ನೋಡಿ ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ ಪ್ರಿಯಾ ಆನಂದ್

| Updated By: ರಾಜೇಶ್ ದುಗ್ಗುಮನೆ

Updated on: Mar 17, 2022 | 1:24 PM

ಚಿತ್ರ ತಂಡದವರು ಅಭಿಮಾನಿಗಳ ಜತೆ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಪ್ರಿಯಾ ಆನಂದ್ ಅತ್ತಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಒಂದು ಸಿನಿಮಾದಲ್ಲಿ ನಟಿಸುವಾಗ ಸಹ ನಟರ ಜತೆ ಒಳ್ಳೆಯ ಬಾಂಧವ್ಯ ಬೆಳೆದಿರುತ್ತದೆ. ಅದರಲ್ಲೂ ಪುನೀತ್​ ರಾಜ್​ಕುಮಾರ್ ಅವರು (Puneeth Rajkumar) ಎಲ್ಲರ ಜತೆ ನಗುನಗುತ್ತಾ ಮಾತನಾಡುತ್ತಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಹತ್ತಿರವಾಗಿದ್ದರು. ‘ರಾಜಕುಮಾರ’ ಹಾಗೂ ‘ಜೇಮ್ಸ್​’ ಸಿನಿಮಾದಲ್ಲಿ (James Movie) ಪುನೀತ್​ ಜತೆ ಪ್ರಿಯಾ ಆನಂದ್​ ನಟಿಸಿದ್ದರು. ಹೀಗಾಗಿ, ಅಪ್ಪು ಅವರನ್ನು ತುಂಬಾನೇ ಹತ್ತಿರದಿಂದ ಅವರು ಕಂಡಿದ್ದರು. ಈಗ ಅವರು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಅವರಿಗೆ ತುಂಬಾನೇ ಬೇಸರ ಆಗುತ್ತಿದೆ. ಇಂದು (ಮಾರ್ಚ್​ 17) ‘ಜೇಮ್ಸ್’ ಸಿನಿಮಾ ರಿಲೀಸ್​ ಆಗಿದೆ. ಚಿತ್ರ ತಂಡದವರು ಅಭಿಮಾನಿಗಳ ಜತೆ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ಬಳಿಕ ಪ್ರಿಯಾ ಆನಂದ್ (Priya Anand) ಅತ್ತಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗುತ್ತಿದೆ. ಈ ವಿಡಿಯೋ ಪ್ರಿಯಾ ಆನಂದ್ ಹಾಗೂ ಪುನೀತ್​ ನಡುವೆ ಇದ್ದ ಗೆಳೆತನವನ್ನು ತೋರಿಸುತ್ತದೆ.

ಇದನ್ನೂ ಓದಿ: ‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ

James Movie Review: ಜೇಮ್ಸ್​ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್​ಫುಲ್​’ ಶೋ

Published on: Mar 17, 2022 01:23 PM