ಟ್ರೋಲ್ ಆಗಿ ಬೀದಿ ಬಸವ ಎಂದು ಕರೆಸಿಕೊಳ್ಳುತ್ತಿರುವ ಪ್ರಿಯಾಂಕ್ ಖರ್ಗೆಯಲ್ಲಿ ಇನ್ಯಾವಾಗ ಸುಧಾರಣೆ? ಚಲವಾದಿ
ಪ್ರಿಯಾಂಕ್ ಖರ್ಗೆ ತನ್ನನ್ನು ಮನುವಾದಿ ಅನ್ನುತ್ತಾರೆ, ತನ್ನದೇನೂ ಅಭ್ಯಂತರವಿಲ್ಲ, ಅನ್ನಲಿ. ಡಾ ಬಿಅರ್ ಅಂಬೇಡ್ಕರ್ ಅವರ ಸಂವಿಧಾನ ದೇಶದಲ್ಲಿ ಜಾರಿಯಾದ ದಿನವೇ ಮನುವಾದ ಸತ್ತುಹೋಯಿತು, ಆದರೆ ಕಾಂಗ್ರೆಸ್ ಅ ಪದವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ, ರಾಜ್ಯದಲ್ಲಿ ದಲಿತರ ಮಾರಣಹೋಮ ನಡೆಯುತ್ತಿದೆ, ₹42,000 ಕೋಟಿ ದುರುಪಯೋಗವಾಗಿರೋದನ್ನು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಚಲವಾದಿ ಕೇಳಿದರು.
ಬೆಂಗಳೂರು, ಮೇ 29: ಬಿಜೆಪಿಯಲ್ಲಿರುವ ಗಟ್ಟಿಧ್ವನಿಯ ನಾಯಕರನ್ನೆಲ್ಲ ಮಟ್ಟ ಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಮೊದಲು ಸಿಟಿ ರವಿಯವರನ್ನು ಟಾರ್ಗೆಟ್ ಮಾಡಿದರು, ನಂತರ ಇದ್ದುದನ್ನು ಇದ್ದಂಗೆ ಹೇಳುತ್ತಾ ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡುತ್ತಿರುವ ತನ್ನ ಮೇಲೆ ಹಗೆ ತೀರಿಸಿಕೊಳ್ಳುವ ಪ್ರಯತ್ನ ನಡೆಯಿತು, ಈಗ ಮತ್ತೊಂದು ಗಟ್ಟಿ ಧ್ವನಿಯಾಗಿರುವ ಎನ್ ರವಿಕುಮಾರ್ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡದಿದೆ ಎಂದು ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಚಲವಾದಿ ಹೇಳಿದರು. ಪ್ರಿಯಾಂಕ್ ಖರ್ಗೆ (Priyank Kharge) ಯಾವ ಪಾಟಿ ಟ್ರೋಲ್ ಆಗುತ್ತಿದ್ದಾರೆಂದರೆ ಜನ ಅವರನ್ನು ಬೀದಿ ಬಸವ ಎನ್ನಲಾರಂಭಿಸಿದ್ದಾರೆ, ಇನ್ನಾದರೂ ಅವರು ತನ್ನ ವಿರುದ್ಧ ಹಲ್ಲು ಮಸೆಯುವುದನ್ನು ನಿಲ್ಲಿಸಲಿ ಎಂದು ಚಲವಾದಿ ಹೇಳಿದರು.
ಇದನ್ನೂ ಓದಿ: ಹಿಂದೂಗಳು ಟಾರ್ಗೆಟ್ ಆಗಿದ್ದನ್ನು ಅಲ್ಲಗಳೆಯುವ ಪ್ರಿಯಾಂಕ್ ಖರ್ಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ: ಚಲವಾದಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

