ಐಪಿಎಲ್ನಲ್ಲಿ ಇಲ್ಲ ಅವಕಾಶ: ವಿದೇಶಿ ಲೀಗ್ನಲ್ಲಿ ಭಾರತೀಯನ ಆರ್ಭಟ
Priyank Panchal: ಪ್ರಿಯಾಂಕ್ ಪಾಂಚಾಲ್ 2021 ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಅಲ್ಲದೆ ಗುಜರಾತ್ ಪರ 127 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಪ್ರಿಯಾಂಕ್ 29 ಶತಕಗಳೊಂದಿಗೆ ಒಟ್ಟು 8856 ರನ್ ಕಲೆಹಾಕಿದ್ದಾರೆ. ಹಾಗೆಯೇ ಲಿಸ್ಟ್ ಎ ಕ್ರಿಕೆಟ್ನಲ್ಲಿ 97 ಮ್ಯಾಚ್ಗಳನ್ನಾಡಿರುವ ಪ್ರಿಯಾಂಕ್ ಪಾಂಚಾಲ್ 8 ಶತಕ ಹಾಗು 21 ಅರ್ಧಶತಕಗಳೊಂದಿಗೆ ಒಟ್ಟು 3672 ರನ್ ಗಳಿಸಿದ್ದಾರೆ.
ಭಾರತೀಯ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ನೇಪಾಳ ಪ್ರೀಮಿಯರ್ ಲೀಗ್ ಮೂಲಕ ವಿದೇಶಿ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ 15 ವರ್ಷಗಳ ಕಾಲ ದೇಶೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕ್ಗೆ ಒಮ್ಮೆಯೂ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಬಲಗೈ ದಾಂಡಿಗ ವಿದೇಶಿ ಲೀಗ್ನತ್ತ ಮುಖ ಮಾಡಿದ್ದಾರೆ. ಅದರಂತೆ ನೇಪಾಳ ಪ್ರೀಮಿಯರ್ ಲೀಗ್ನ ದ್ವಿತೀಯ ಸೀಸನ್ನಲ್ಲಿ ಕರ್ನಾಲಿ ಯಾಕ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.
ತ್ರಿಭುವನ್ ಯುನಿವರ್ಸಿಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎನ್ಪಿಎಲ್ನ 2ನೇ ಪಂದ್ಯದಲ್ಲಿ ಪ್ರಿಯಾಂಕ್ ಪಾಂಚಾಲ್ ಕರ್ನಾಲಿ ಯಾಕ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಚಿತ್ವಾನ್ ರೈನೋಸ್ ವಿರುದ್ಧದ ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪ್ರಿಯಾಂಕ್ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 48 ಎಸೆತಗಳಲ್ಲಿ 90 ರನ್ ಬಾರಿಸಿದ್ದಾರೆ.
ಈ ಮೂಲಕ ನೇಪಾಳ ಪ್ರೀಮಿಯರ್ ಲೀಗ್ನಲ್ಲಿ ಅರ್ಧಶತಕ ಸಿಡಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ ಎನ್ಪಿಎಲ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.
ಇನ್ನು ಪ್ರಿಯಾಂಕ್ ಪಾಂಚಾಲ್ ಬಾರಿಸಿದ ಈ ಅರ್ಧಶತಕದ ನೆರವಿನೊಂದಿಗೆ ಕರ್ನಾಲಿ ಯಾಕ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚಿತ್ವಾನ್ ರೈನೋಸ್ ತಂಡ 19.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಜಯ ಸಾಧಿಸಿದೆ.
ಅಂದಹಾಗೆ ಪ್ರಿಯಾಂಕ್ ಪಾಂಚಾಲ್ 2021 ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಅಲ್ಲದೆ ಗುಜರಾತ್ ಪರ 127 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಪ್ರಿಯಾಂಕ್ 29 ಶತಕಗಳೊಂದಿಗೆ ಒಟ್ಟು 8856 ರನ್ ಕಲೆಹಾಕಿದ್ದಾರೆ.
ಹಾಗೆಯೇ ಲಿಸ್ಟ್ ಎ ಕ್ರಿಕೆಟ್ನಲ್ಲಿ 97 ಮ್ಯಾಚ್ಗಳನ್ನಾಡಿರುವ ಪ್ರಿಯಾಂಕ್ ಪಾಂಚಾಲ್ 8 ಶತಕ ಹಾಗು 21 ಅರ್ಧಶತಕಗಳೊಂದಿಗೆ ಒಟ್ಟು 3672 ರನ್ ಗಳಿಸಿದ್ದಾರೆ. ಇದರ ಜೊತೆಗೆ 59 ಟಿ20 ಪಂದ್ಯಗಳನ್ನಾಡಿರುವ ಅವರು 1522 ರನ್ಗಳಿಸಿದ್ದಾರೆ. ಇದಾಗ್ಯೂ ಅವರಿಗೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ತಮ್ಮ 34ನೇ ವಯಸ್ಸಿಗೆ ಭಾರತೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಅಲ್ಲದೆ ಇದೀಗ ವಿದೇಶಿ ಲೀಗ್ನತ್ತ ಮುಖ ಮಾಡಿದ್ದಾರೆ.

