Loading video

‘ಚಿತ್ರರಂಗದಲ್ಲಿ ಯಶ್ ಮಾತ್ರ​ ರಾಜಾಹುಲಿ’ ಎಂದ ನಿರ್ಮಾಪಕ ಕೆ. ಮಂಜು

|

Updated on: May 29, 2023 | 8:07 AM

ನಿರ್ಮಾಪಕ ಕೆ.ಮಂಜು ಸಿನಿಮಾ ಟೈಟಲ್ ಬಗ್ಗೆ ಮಾತನಾಡಿದ್ದಾರೆ. ‘ರಾಜಕೀಯಕ್ಕೆ ಯಡಿಯೂರಪ್ಪ ರಾಜಾಹುಲಿ. ಸಿನಿಮಾಗೆ ಯಶ್ ಅವರೇ ರಾಜಾಹುಲಿ’ ಎಂದಿದ್ದಾರೆ.

ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ (Rajahuli Movie) ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಹೊನ್ನರಾಜ್ ಹಾಗೂ ಶೃತಿ ಬಬಿತಾ ನಟಿಸಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಸಿನಿಮಾ ಬಗ್ಗೆ ಇಡೀ ಚಿತ್ರತಂಡ ಮಾತನಾಡಿದೆ. ಈ ವೇಳೆ ನಿರ್ಮಾಪಕ ಕೆ.ಮಂಜು ಸಿನಿಮಾ ಟೈಟಲ್ ಬಗ್ಗೆ ಮಾತನಾಡಿದ್ದಾರೆ. ‘ರಾಜಕೀಯಕ್ಕೆ ಯಡಿಯೂರಪ್ಪ ರಾಜಾಹುಲಿ. ಸಿನಿಮಾಗೆ ಯಶ್ (Yash) ಅವರೇ ರಾಜಾಹುಲಿ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ