ನಾಗೇಂದ್ರ ಪ್ರಸಾದ್ ಬದುಕು ಬದಲಾಯಿಸಿದ ‘ಶ್ರೀ ಮಂಜುನಾಥ’ ಅವಕಾಶ ದೊರಕಿದ್ದು ಹೇಗೆ?

Weekend With Ramesh: ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್, ವೀಕೆಂಡ್ ವಿತ್ ರಮೇಶ್​ನಲ್ಲಿ ತಮ್ಮ ಜೀವನ ಪಯಣದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನ ಬದಲಿಸಿದ ಶ್ರೀ ಮಂಜುನಾಥ ಸಿನಿಮಾದ ಅವಕಾಶ ತಮಗೆ ಸಿಕ್ಕ ಬಗೆಯನ್ನು ಅವರು ವಿವರಿಸಿದ್ದಾರೆ.

ನಾಗೇಂದ್ರ ಪ್ರಸಾದ್ ಬದುಕು ಬದಲಾಯಿಸಿದ 'ಶ್ರೀ ಮಂಜುನಾಥ' ಅವಕಾಶ ದೊರಕಿದ್ದು ಹೇಗೆ?
ನಾಗೇಂದ್ರ ಪ್ರಸಾದ್
Follow us
ಮಂಜುನಾಥ ಸಿ.
|

Updated on:May 20, 2023 | 11:26 PM

ವಿ ನಾಗೇಂದ್ರ ಪ್ರಸಾದ್ (V Nagendra Prasad) ಕನ್ನಡ ಸಿನಿರಂಗದಲ್ಲಿ ಬಹುಜನಪ್ರಿಯ ಹೆಸರು. ಒಂದೊಮ್ಮೆ ಅವರ ಹೆಸರನ್ನು ಕೇಳದವರೂ ಸಹ ಅವರು ಬರೆದ ಹಾಡನ್ನು ಕೇಳಿರದೇ ಇರಲಾರರು. 1000 ಕ್ಕೂ ಹೆಚ್ಚು ಸಿನಿಮಾಗಳಿಗೆ 3000 ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಈ ವರೆಗೆ ಬರೆದಿದ್ದಾರೆ. ಬಹಳ ಬಡಕುಟುಂಬದಿಂದ ಬಂದ ನಾಗೇಂದ್ರ ಪ್ರಸಾದರಿಗೆ ಸರಸ್ವತಿ ದೇವಿ ಕೈಹಿಡಿದು ಬಹುದೂರ ನಡೆಸಿಕೊಂಡು ಬಂದಿದ್ದಾರೆ. ಜೀವನದ ಬಂಡಿ ಎಳೆಯಲು ಕಷ್ಟಪಡುತ್ತಿದ್ದ ದಿನಗಳಲ್ಲಿ ಸಿನಿಮಾ ಅವಕಾಶ ಅವರನ್ನು ಅರಸಿ ಬಂದಿದ್ದು ಆಕಸ್ಮಿಕವಾಗಿ. ಅವರ ಜೀವನ ಬದಲಿಸಿದ್ದು ಶ್ರೀ ಮಂಜುನಾಥ (Sri Manjunatha) ಆದರೂ ಆ ಅವಕಾಶ ದೊರಕಲು ಕಾರಣವಾಗಿದ್ದು ಆ ಒಂದು ಸಿನಿಮಾ!

ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಪ್ರಸಾದರು ಪುಸ್ತಕ ಓದಲು ಪಾರ್ಕ್​ ಅಥವಾ ವಿಹಾರಕ್ಕೆಂದು ಪಾರ್ಕ್​ ಒಂದಕ್ಕೆ ಪ್ರತಿದಿನ ಹೋಗುತ್ತಿದ್ದರಂತೆ. ಅದೇ ಪಾರ್ಕ್​ಗೆ ನಿರ್ದೇಶಕ ಕೆವಿ ಜಯರಾಂ ಸಹ ಬರುತ್ತಿದ್ದರಂತೆ. ಕೆವಿ ಜಯರಾಂ ಅವರ ಬಗ್ಗೆ ತಿಳಿದಿದ್ದ ನಾಗೇಂದ್ರ ಪ್ರಸಾದ್ ಪ್ರತಿದಿನವೂ ಅವರನ್ನು ಕಂಡಾಗ ನಮಸ್ಕಾರ ತಿಳಿಸಿ ಮುಂದೆ ಸಾಗುತ್ತಿದ್ದರಂತೆ. ಹೀಗೆ ಪ್ರತಿದಿನ ಮಾತನಾಡುತ್ತಿದ್ದ ನಾಗೇಂದ್ರ ಪ್ರಸಾದರನ್ನು ಒಂದು ದಿನ ಮಾತಿಗೆ ಕರೆದ ಜಯರಾಂ ಅವರು ಏನು ಓದುತ್ತಿದ್ದೀಯ? ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ಕನ್ನಡ ಸ್ನಾತಕೋತ್ತರ ಪದವಿ ಕಲಿಯುತ್ತಿರುವುದಾಗಿ ಉತ್ತರಿಸಿದ್ದಾರೆ. ನಾಗೇಂದ್ರ ಪ್ರಸಾದರಿಗೆ ಗಾಜಿನ ಮನೆ ಕಾದಂಬರಿ ನೀಡಿದ ಜಯರಾಮರು ಇದನ್ನು ಓದಿಕೊಂಡು ಬಾ ಚರ್ಚಿಸೋಣ ಎಂದರಂತೆ. ಅಂತೆಯೇ ನಾಗೇಂದ್ರ ಪ್ರಸಾದರು ಓದಿಕೊಂಡು ಹೋಗಿ ಅವರ ಬಳಿ ಚರ್ಚಿಸಿದ್ದಾರೆ.

ನಾಗೇಂದ್ರ ಪ್ರಸಾದರ ವಿಶ್ಲೇಷಣೆ ಮೆಚ್ಚಿಕೊಂಡ ಜಯರಾಮರು ಆ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದಾಗಿ ಹೇಳಿ ಚಿತ್ರಕತೆ ಚರ್ಚಿಸಿದ್ದಾರೆ. ಬಳಿಕ ಆ ಸಿನಿಮಾಕ್ಕೆ ಸಂಭಾಷಣೆ ಬರೆಯುವಂತೆ ಸೂಚಿಸಿದ್ದಾರೆ. ನಂತರ ಮತ್ತೆ ಸಿನಿಮಾಕ್ಕೆ ಹಾಡುಗಳನ್ನು ಬರೆಯುವಂತೆ ಹೇಳಿದರಂತೆ. ಮೊದಲ ಸಿನಿಮಾ ಅವಕಾಶವನ್ನು ತಟ್ಟನೆ ಒಪ್ಪಿಕೊಂಡ ನಾಗೇಂದ್ರ ಪ್ರಸಾದರು ಹಾಡು ಬರೆದುಕೊಟ್ಟರಂತೆ.

ಅದಾದ ಬಳಿಕ ಎನ್​ಜಿಓ ಒಂದರಲ್ಲಿ ತಿಂಗಳ ಸಂಬಳ ಏಳು ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನಾಗೇಂದ್ರ ಪ್ರಸಾದ್, ನಾನು ಏನಾದರೂ ಮಾಡಿದರೆ ಅದು ಸಿನಿಮಾ ರಂಗದಲ್ಲಿಯೇ ಎಂದುಕೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಕೆಲಸ ಹುಡುಕಿಕೊಂಡು ಚಿನ್ನಿ ಫಿಲಮ್ಸ್​ಗೆ ಹೋಗಿದ್ದಾರೆ. ಅಲ್ಲಿ ಪರಿಚಯ ಹೇಳಿಕೊಂಡು ತಾವು ಬರೆದ ಗಾಜಿನ ಮನೆ ಸಿನಿಮಾದ ಹಾಡು ಕೇಳಿಸಿ ಕೆಲಸ ಕೊಡುವಂತೆ ಕೇಳಿದ್ದಾರೆ. ಕೆಲವು ದಿನಗಳ ಬಳಿಕ ಶ್ರೀದೇವಿಯವರು ನಟ ವಾಸುಗೆ ಹೇಳಿ ನಾಗೇಂದ್ರ ಪ್ರಸಾದ್ ಅನ್ನು ಕರೆಸಿಕೊಂಡು ಶ್ರೀ ಮಂಜುನಾಥ ಸಿನಿಮಾದ ಕೆಲಸಗಳಿಗೆ ತೊಡಗಿಸಿಕೊಂಡಿದ್ದಾರೆ.

ಶಿವನಿಗೆ ಸಂಬಂಧಿಸಿದ ಪುಸ್ತಕಗಳನ್ನು ತರಿಸಿ ಓದಿಕೊಂಡಿದ್ದ ನಾಗೇಂದ್ರ ಪ್ರಸಾದ್ ಆ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಲ್ಲದೆ ಸೂಪರ್ ಹಿಟ್ ಹಾಡು ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೆ ಹಾಡು ಬರೆದರು. ಆ ಸಿನಿಮಾ ನಾಗೇಂದ್ರ ಪ್ರಸಾದರಿಗೆ ದೊಡ್ಡ ಹೆಸರು ಗಳಿಸಿಕೊಟ್ಟಿತು. ಅಂದಿನಿಂದ ನಾಗೇಂದ್ರ ಪ್ರಸಾದ್ ತಿರುಗಿ ನೋಡಿದ್ದೇ ಇಲ್ಲ. ಈವರೆಗೆ ಸಾವಿರಾರು ಆಲ್​ ಟೈಮ್ ಹಿಟ್ ಗೀತೆಗಳನ್ನು ಕನ್ನಡಕ್ಕೆ ನೀಡಿದ್ದಾರೆ.

Published On - 11:25 pm, Sat, 20 May 23

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ