ಸೋನಿಯಾ ಗಾಂಧಿಯ ಪುಸ್ತಕ ವಿರೋಧಿಸುವ ಭರದಲ್ಲಿ ಬಾಳಾ ಠಾಕ್ರೆಯ ಫೋಟೋ ಹರಿದ ಶಿವಸೇನೆ ನಾಯಕಿ!
Shiv Sena Leaders Tore Balasaheb Photo

ಸೋನಿಯಾ ಗಾಂಧಿಯ ಪುಸ್ತಕ ವಿರೋಧಿಸುವ ಭರದಲ್ಲಿ ಬಾಳಾ ಠಾಕ್ರೆಯ ಫೋಟೋ ಹರಿದ ಶಿವಸೇನೆ ನಾಯಕಿ!

Updated on: Nov 18, 2026 | 6:26 PM

ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಖಂಡಿಸಲು ಶಿವಸೇನೆ ನಾಯಕರು ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ ಪುಸ್ತಕದ ಪುಟಗಳು ಹಾಗೂ ಕಾಗದಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ, ಶೈನಾ ಎನ್‌ಸಿ ಅವರ ಕೈಯಲ್ಲಿದ್ದ ಬಾಳಾ ಠಾಕ್ರೆ ಅವರ ಫೋಟೋವಿದ್ದ ಪೇಪರ್ ಕೂಡ ಹರಿದುಹೋಗಿದೆ. ತಕ್ಷಣವೇ ತಮ್ಮ ತಪ್ಪಿನ ಅರಿವಾದಾಗ, ಅವರು ಹರಿದ ಕಾಗದವನ್ನು ಇತರ ಕಾಗದಗಳ ರಾಶಿಯ ಕೆಳಗೆ ಬಚ್ಚಿಡಲು ಪ್ರಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಂಬೈ, ನವೆಂಬರ್ 18: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯಲ್ಲಿ ವೀರ ಸಾವರ್ಕರ್ ಕುರಿತಾದ ಉಲ್ಲೇಖಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಶಿವಸೇನೆ (ಶಿಂಧೆ ಬಣ) ರಾಷ್ಟ್ರೀಯ ವಕ್ತಾರೆ ಶೈನಾ ಎನ್‌ಸಿ  ಅಚಾತುರ್ಯದಿಂದ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನೇ ಹರಿದುಹಾಕಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಖಂಡಿಸಲು ಶಿವಸೇನೆ ನಾಯಕರು ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ ಪುಸ್ತಕದ ಪುಟಗಳು ಹಾಗೂ ಕಾಗದಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ, ಶೈನಾ ಎನ್‌ಸಿ ಅವರ ಕೈಯಲ್ಲಿದ್ದ ಬಾಳಾ ಠಾಕ್ರೆ ಅವರ ಫೋಟೋವಿದ್ದ ಪೇಪರ್ ಕೂಡ ಹರಿದುಹೋಗಿದೆ. ತಕ್ಷಣವೇ ತಮ್ಮ ತಪ್ಪಿನ ಅರಿವಾದಾಗ, ಅವರು ಹರಿದ ಕಾಗದವನ್ನು ಇತರ ಕಾಗದಗಳ ರಾಶಿಯ ಕೆಳಗೆ ಬಚ್ಚಿಡಲು ಪ್ರಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವಿರೋಧ ಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ನಾಯಕರು ಆಡಳಿತರೂಢ ಶಿಂಧೆ ಬಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಅವರ ಹೆಸರಿನಲ್ಲಿ ರಾಜಕಾರಣ ಮಾಡುವವರಿಗೆ ಅವರ ಬಗ್ಗೆ ನಿಜವಾದ ಗೌರವವಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದು, ಶೈನಾ ಎನ್‌ಸಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More