ಕನಕಪುರದ ಸಂಗಮಘಾಟ್ ಸೆಕ್ಷನ್​ನಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನ ಬ್ರೇಕ್ ಫೇಲ್, ಪ್ರಯಾಣಿಕರು ಬದುಕುಳಿದಿದ್ದೇ ಪವಾಡ!

|

Updated on: Jan 01, 2025 | 5:23 PM

ಕೆಎಸ್ಸಾರ್ಟಿಸಿ ಬಸ್​ಗಳನ್ನು ಡಿಪೋಗಳಿಂದ ಶೆಡ್ಯೂಲ್ ಮೇಲೆ ಕಳಿಸುವಾಗ ಅಲ್ಲಿರುವ ಮೆಕ್ಯಾನಿಕ್ ಗಳು ಬಸ್ ಚಾಲನೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಿ ಸಂಚಾರಕ್ಕೆ ಯೋಗ್ಯ ಅಂತ ಓಕೆ ಮಾಡುತ್ತಾರೆ. ಬಸ್ಸಿನ ಶೆಡ್ಯೂಲ್ ಘಾಟ್ ಸೆಕ್ಷನ್​ ಮೂಲಕ ಇದ್ದಿದ್ದೇಯಾದರೆ ಅದನ್ನು ಎರಡೆರಡು ಸಲ ಚೆಕ್ ಮಾಡಲಾಗುತ್ತದೆ. ಅಪಘಾತಕ್ಕೊಳಗಾದ ಬಸ್ಸು ಪ್ರಾಯಶಃ ಕನಕಪುರ ಡಿಪೋಗೆ ಸೇರಿದ್ದಿರಬಹುದು.

ರಾಮನಗರ: ಈ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ನಿಜಕ್ಕೂ ಅದೃಷ್ಟವಂತರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಪ್ರಪಾತಕ್ಕೆ ಉರುಳಿಬಿದ್ದಿದ್ದರೆ ಅದರಲ್ಲಿ ಪ್ರಯಾಣಿಸುತ್ತಿದ್ದ 110 ಜನರಲ್ಲಿ ಎಷ್ಟು ಜನ ಬದುಕುಳಿಯುತ್ತಿದ್ದರು ಅನ್ನೋದನ್ನು ಅವರನ್ನು ಉಳಿಸಿದ ದೇವರೇ ಬಲ್ಲ. ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಂಗಮ್ ಘಾಟ್ ಸೆಕ್ಷನ್​ನಲ್ಲಿ ಅಪಘಾತ ಸಂಭವಿಸಿದೆ. ಶಿವಂಕಾರೇಶ್ವರಕ್ಕೆ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರನ್ನು ಹೊತ್ತ ಬಸ್ಸಿನ ಬ್ರೇಕ್ ಫೇಲ್ ಆದಕಾರಣ ದಿಕ್ಕು ತೋಚದಂತಾದ ಚಾಲಕ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದ್ದಾನೆ. ಢಿಕ್ಕಿ ಹೊಡೆದ ಬಳಿಕ ಬಸ್ಸು ನಿಶ್ಚಲ ಸ್ಥಿತಿಗೆ ಬಂದುಬಿಟ್ಟಿದೆ. ಕೊಂಚವೇ ಹೆಚ್ಚುಕಡಿಮೆಯಾಗಿದ್ದರೂ ವಾಹನ ಪ್ರಪಾತಕ್ಕೆ ಉರುಳುತಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಫಿಟ್ಸ್, ಸರಣಿ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್