ಯಾದಗಿರಿ: ನಕಲಿ ಆಹಾರ ಸುರಕ್ಷತಾ ಅಧಿಕಾರಿಯ ಚಳಿ ಬಿಡಿಸಿದ ಅಂಗಡಿ ಮಾಲಿಕರು

Edited By: ವಿವೇಕ ಬಿರಾದಾರ

Updated on: Dec 15, 2023 | 12:10 PM

ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿ ಕಿರಾಣಿ ಅಂಗಡಿ, ಬೇಕರಿ, ರೈಸ್ ಮಿಲ್ ಸೇರಿದಂತೆ ಯಾದಗಿರಿ ನಗರದ ವಿವಿಧ ಅಂಗಡಿ ಮಾಲಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಯಾದಗಿರಿ, ಡಿಸೆಂಬರ್​ 15: ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿ ಕಿರಾಣಿ ಅಂಗಡಿ, ಬೇಕರಿ, ರೈಸ್ ಮಿಲ್ (Rice Mill) ಸೇರಿದಂತೆ ಯಾದಗಿರಿ (Yadgiri) ನಗರದ ವಿವಿಧ ಅಂಗಡಿ ಮಾಲಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ರಾಯಚೂರು ಮೂಲದ ವಿಜಯ ಕುಮಾರ್ ಆಹಾರ ಸುರಕ್ಷತಾ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ನಗರದ ವಿವಿಧ ಕಿರಾಣಿ ಅಂಗಡಿ, ಬೇಕರಿ ಮತ್ತು ರೈಸ್​ ಮಿಲ್​ಗಳಿಗೆ ಹೋಗುತ್ತಿದ್ದನು.

ಇಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲವೆಂದು ಹೇಳಿ ಅಂಗಡಿ ಮಾಲೀಕರಿಗೆ ಹೆದರಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದನು. ಹೀಗೆ ಕಳೆದ ಒಂದು ವಾರದಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಾನೆ. ಇಂದು (ಡಿ.15) ನಗರ ಒಂದು ಅಂಗಡಿಗೆ ಹೋಗಿ, ಮಾಲಿಕರಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾನೆ. ಆದರೆ ಅಂಗಡಿ ಮಾಲೀಕರಿಗೆ ಶಂಕೆ ಬಂದ ಕೂಡಲೆ ನಿಜವಾದ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ.

ಆಗ ವಿಜಯ ಕುಮಾರ್ ಬಣ್ಣ ಬಯಲಾಗಿದೆ. ನಕಲಿ ಅಧಿಕಾರಿ ಎಂದು ಗೊತ್ತಾಗುತ್ತಿದ್ದ ಹಾಗೆ ನಾನು (ವಿಜಯ್​ ಕುಮಾರ್​) ಭ್ರಷ್ಟಾಚಾರ ವಿರೋಧಿ ದಳದಿಂದ ಬಂದಿದ್ದೆನೆ ಎಂದಿದ್ದಾನೆ. ಮಾತು ಬದಲಾಯಿಸುತ್ತಿದ್ದಂತೆ ಮತ್ತು ಬಣ್ಣ ಬಯಲಾಗುತ್ತಿದ್ದಂತೆ ಕುಪಿತಗೊಂಡ ಅಂಗಡಿ ಮಾಲಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಯಾದಗಿರಿ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More