Video: ರೈಲಿನಲ್ಲಿ ಸೀಟಿಗಾಗಿ ಗರ್ಭಿಣಿಯ ಹೊಟ್ಟೆಗೆ ಕಾಲಿನಲ್ಲಿ ಒದ್ದ ವ್ಯಕ್ತಿ

Updated on: Oct 24, 2025 | 5:03 PM

ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸಾರಿಗೆಯಲ್ಲಿ ಹೇಗೆ ವರ್ತಿಸಬೇಕು ಎಂಬುದು ಮುಖ್ಯ. ಹಿರಿಯರು, ಮಹಿಳೆಯರು, ಮತ್ತು ಗರ್ಭಿಣಿಯರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮಾನವೀಯತೆಯ ಲಕ್ಷಣ. ದೆಹಲಿ ರೈಲಿನಲ್ಲಿ ಸೀಟಿಗಾಗಿ ಗರ್ಭಿಣಿ ಮಹಿಳೆಯೊಬ್ಬರಿಗೆ ಒದ್ದ ಘಟನೆ, ಸಮಾಜದಲ್ಲಿ ಮಾನವೀಯತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ವೈರಲ್​ ಆಗಿರುವ ವಿಡಿಯೋ ಇಲ್ಲಿದೆ ನೋಡಿ.

ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತನೆ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇದರ ಜತೆಗೆ ನಮ್ಮ ಮುಂದೆ ಇರುವ ವ್ಯಕ್ತಿಯ ಪರಿಸ್ಥಿತಿ ನೋಡಬೇಕು. ಅದೆಷ್ಟೋ ಕಡೆ ಬಸ್​​​ ಸೀಟಿಗಾಗಿ ಕಿತ್ತಾಟ ಮಾಡುವುದು, ರೈಲಿನಲ್ಲೂ ಇದು ಸಾಮಾನ್ಯ, ಆದರೆ ಅದಕ್ಕಾಗಿ ತರ್ಕ ಮಾಡುವ ಮೊದಲು ನಮ್ಮ ಮುಂದೆ ಇರುವ ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿಕೊಂಡ ಮಾಡಬೇಕು. ಮಾನವೀಯತೆ ಕಳೆದುಕೊಂಡು ಹಿರಿಯರು, ಕಿರಿಯರು, ಗರ್ಭಿಣಿ, ಮಹಿಳೆಯರು ಎಂಬುದನ್ನು ನೋಡದೇ ನಡೆದುಕೊಳ್ಳುವುದು ಸರಿಯಲ್ಲ. ಎಕ್ಸ್​​ ಖಾತೆಯಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ಇದು ದೆಹಲಿ ರೈಲನಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ ರೈಲು ಸೀಟಿಗಾಗಿ ಗರ್ಭಿಣಿಯ ಹೊಟ್ಟೆಗೆ ವ್ಯಕ್ತಿಯೊಬ್ಬ ಒದ್ದಿದ್ದು,  ಗರ್ಭಿಣಿ  ಅಸ್ವಸ್ಥಯಾಗಿ ಬಿದ್ದಿದ್ದಾರೆ. ಅದರೂ ಆ ವ್ಯಕ್ತಿ ಸೀಟ್​​​ಗಾಗಿ ಜಗಳಕ್ಕೆ ಇಳಿದಿದ್ದಾನೆ.

ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 24, 2025 05:02 PM