Dr Rajkumar: ಅಭಿಮಾನಿಯ ಮದುವೆಯಲ್ಲಿ ಪುನೀತ್​, ರಾಜ್​ಕುಮಾರ್​ ಫೋಟೋಗಳಿಂದಲೇ ಕಲ್ಯಾಣ ಮಂಟಪದ ಸಿಂಗಾರ

Dr Rajkumar: ಅಭಿಮಾನಿಯ ಮದುವೆಯಲ್ಲಿ ಪುನೀತ್​, ರಾಜ್​ಕುಮಾರ್​ ಫೋಟೋಗಳಿಂದಲೇ ಕಲ್ಯಾಣ ಮಂಟಪದ ಸಿಂಗಾರ

ಮದನ್​ ಕುಮಾರ್​
|

Updated on:Apr 24, 2023 | 5:06 PM

Puneeth Rajkumar Fans: ಮದುವೆ ನಡೆದ ಕಲ್ಯಾಣ ಮಂಟಪದ ತುಂಬೆಲ್ಲ ಅಣ್ಣಾವ್ರು ಮತ್ತು ಪುನೀತ್​ ರಾಜ್​ಕುಮಾರ್​ ಅವರ ಫೋಟೋಗಳೇ ರಾರಾಜಿಸಿವೆ. ಇವರ ಅಭಿಮಾನಕ್ಕೆ ಡಾ. ರಾಜ್​ ಕುಟುಂಬ ಫಿದಾ ಆಗಿದೆ.

ಡಾ. ರಾಜ್​ಕುಮಾರ್​ (Dr Rajkumar) ಅವರ ಇಡೀ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಈ ಫ್ಯಾಮಿಲಿಯ ನಟರನ್ನು ಆರಾಧಿಸುವ ಅಪ್ಪಟ ಅಭಿಮಾನಿಗಳು ಕರುನಾಡಿನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಘಟನೆ ನಡೆದಿದೆ. ರಾಜ್​ಕುಮಾರ್​ ಹುಟ್ಟುಹಬ್ಬದ ದಿನವೇ (ಏಪ್ರಿಲ್​ 24) ಬೆಂಗಳೂರಿನಲ್ಲಿ ನವೀನ್​ ಕುಮಾರ್​ ಮತ್ತು ಶ್ವೇತಾ ಎಂಬುವವರು ಹಸೆಮಣೆ ಏರಿದ್ದಾರೆ. ಮದುವೆ ನಡೆದ ಕಲ್ಯಾಣ ಮಂಟಪದ ತುಂಬೆಲ್ಲ ಅಣ್ಣಾವ್ರು ಮತ್ತು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಫೋಟೋಗಳೇ ರಾರಾಜಿಸಿವೆ. ಇವರ ಅಭಿಮಾನಕ್ಕೆ ಯುವ ರಾಜ್​ಕುಮಾರ್​ (Yuva Rajkumar) ಮತ್ತು ರಾಘವೇಂದ್ರ ರಾಜ್​ಕುಮಾರ್​ ಫಿದಾ ಆಗಿದ್ದಾರೆ. ನವ ಜೋಡಿಗೆ ವಿಡಿಯೋ ಕಾಲ್​ ಮಾಡಿ ಅವರು ಹಾರೈಸಿದ್ದಾರೆ. ಈ ವಿಶೇಷ ವಿಡಿಯೋ ಇಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 24, 2023 05:06 PM