ಜಿಮ್​ನಲ್ಲಿ ಪುನೀತ್ ರಾಜ್​ಕುಮಾರ್ ವರ್ಕೌಟ್​​: ಹೇಗಿರುತ್ತಿತ್ತು ಗೊತ್ತಾ ಅಪ್ಪು ಕಸರತ್ತು​? ಇಲ್ಲಿದೆ ವಿಡಿಯೋ​

Edited By:

Updated on: Oct 30, 2021 | 8:36 AM

ಜಿಮ್​ನಲ್ಲಿ ಕಸರತ್ತು ಮಾಡುವ ವಿಡಿಯೋಗಳನ್ನು ಪುನೀತ್​ ರಾಜ್​ಕುಮಾರ್​ ಆಗಾಗ ಪೋಸ್ಟ್​ ಮಾಡುತ್ತಿದ್ದರು. ಅದನ್ನು ಕಂಡರೆ ಎಲ್ಲರಿಗೂ ಸ್ಫೂರ್ತಿ ಬರುವಂತಿತ್ತು.

ಪುನೀತ್​ ರಾಜ್​ಕುಮಾರ್​ ಅವರು ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಶೂಟಿಂಗ್​ ಬ್ಯುಸಿ ನಡುವೆಯೂ ಅವರು ವರ್ಕೌಟ್​ ತಪ್ಪಿಸುತ್ತಿರಲಿಲ್ಲ. 46ರ ಪ್ರಾಯದಲ್ಲಿ ಹದಿಹರೆಯದವರೂ ನಾಚುವಂತೆ ಅವರು ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದರು. ಜಿಮ್​ನಲ್ಲಿ ಕಸರತ್ತು ಮಾಡುವ ವಿಡಿಯೋಗಳನ್ನು ಅಪ್ಪು ಆಗಾಗ ಪೋಸ್ಟ್​ ಮಾಡುತ್ತಿದ್ದರು. ಅದನ್ನು ಕಂಡರೆ ಎಲ್ಲರಿಗೂ ಸ್ಫೂರ್ತಿ ಬರುವಂತಿತ್ತು. ಎಲ್ಲ ಯುವಕರಿಗೂ ಪುನೀತ್​ ಮಾದರಿ ಆಗಿದ್ದರು. ಅಂಥ ವ್ಯಕ್ತಿ ಹೃದಯಾಘಾತದಿಂದ ನಿಧನರಾದರು ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನಕ್ಕೆ ಶನಿವಾರ (ಅ.30) ದಿನವಿಡೀ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ದೂರದೂರದ ಊರುಗಳಿಂದ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಬಂದು ಕಣ್ಣೀರು ಸುರಿಸುತ್ತಿದ್ದಾರೆ. ಭಾನುವಾರ ಕಂಠೀರವ ಸ್ಡುಡಿಯೋ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ:

Puneeth Rajkumar: ‘ನನ್ನ ತಮ್ಮ ರಾಯಲ್​ ಆಗಿಯೇ ಇರುತ್ತಾನೆ’; ಕ್ರೂರ ವಿಧಿಯಿಂದ ಸುಳ್ಳಾಯ್ತು ಶಿವಣ್ಣನ ಈ ಮಾತು

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

Loading...
Unable to load recommendations.
Follow Us
TV9 Web

TV9 Kannada

Read More