ಪುನೀತ್ ಇಲ್ಲದೇ ಕಳೆಯಿತು ನಾಲ್ಕು ತಿಂಗಳು; ಸಮಾಧಿಗೆ ಪೂಜೆ ಸಲ್ಲಿಸಿದ ಮಕ್ಕಳು
ಪ್ರತಿ ದಿನ ನೂರಾರು ಅಭಿಮಾನಿಗಳು ಬಂದು ಪುನೀತ್ ರಾಜ್ಕುಮಾರ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಅಪ್ಪು ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಇಂದು (ಫೆ.28) ಅರ್ಪಿಸಲಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ನಾಲ್ಕು ತಿಂಗಳು ಮುಗಿದಿದೆ. ‘ಪವರ್ ಸ್ಟಾರ್’ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಲೇ ಇಲ್ಲ. ಅ.29ರಂದು ಅಪ್ಪು ಹೃದಯಾಘಾತದಿಂದ ನಿಧನರಾದಾಗ ಅವರ ಕುಟುಂಬಕ್ಕೆ (Puneeth Rajkumar Family) ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇಂದಿಗೂ ಕೂಡ ಪುನೀತ್ ಪತ್ನಿ-ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂದು (ಫೆ.28) ಫೆಬ್ರವರಿ ತಿಂಗಳ ಕೊನೇ ದಿನ. ಹಾಗಾಗಿ 29ನೇ ತಾರೀಕಿನ ಬದಲಿಗೆ ಒಂದು ದಿನ ಮುಂಚಿತವಾಗಿ ಪುನೀತ್ ರಾಜ್ಕುಮಾರ್ ಸಮಾಧಿಗೆ (Puneeth Rajkumar Samadhi) ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ. ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್ ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಅರ್ಪಿಸಲಾಗಿದೆ. ಇಂದಿಗೂ ಕೂಡ ಪ್ರತಿ ದಿನ ನೂರಾರು ಅಭಿಮಾನಿಗಳು ಬಂದು ಅಪ್ಪು ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಪುನೀತ್ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್’ ಬಿಡುಗಡೆಗೆ ಸಜ್ಜಾಗಿದೆ. ಪುನೀತ್ ಜನ್ಮದಿನದ ಪ್ರಯುಕ್ತ ಮಾ.17ರಂದು ಆ ಚಿತ್ರ ರಿಲೀಸ್ ಆಗಲಿದೆ.
ಇದನ್ನೂ ಓದಿ:
‘ಜೇಮ್ಸ್’ ಚಿತ್ರದಲ್ಲಿ ಪುನೀತ್ಗೆ ಡಬ್ ಮಾಡುವಾಗ ಶಿವಣ್ಣ ಎಮೋಷನಲ್ ಆಗಿದ್ದರು: ನಿರ್ದೇಶಕ ಚೇತನ್