ಪುನೀತ್ ಮೇಲಿನ ಅಭಿಮಾನಕ್ಕೆ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ ಫ್ಯಾನ್ಸ್; ಇಲ್ಲಿದೆ ವಿಡಿಯೋ
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಇರುವ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಈ ಕಾರ್ಯ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ ಅವರ ನೆನಪು ಎಂದಿಗೂ ಹಸಿರಾಗಿ ಇರುತ್ತದೆ. ಸಿನಿಮಾ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದ ಅವರನ್ನು ಮರೆಯಲು ಸಾಧ್ಯವಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಅನೇಕ ರಸ್ತೆ, ವೃತ್ತ, ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ಹೆಸರು ಇಡಲಾಗಿದೆ. ದೇವರ ಪಕ್ಕದಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಕೂಡ ಇದೆ. ಈಗ ಪುನೀತ್ ರಾಜ್ಕುಮಾರ್ ಅವರ ಮೂರ್ತಿಯನ್ನು (Puneeth Rajkumar Statue) ಪ್ರತಿಷ್ಠಾಪನೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಹೂವಿನ ಹಡಗಲಿಯಲ್ಲಿ (Huvina Hadagali) ಇರುವ ‘ಪವರ್ ಸ್ಟಾರ್’ ಫ್ಯಾನ್ಸ್ ಈ ಕಾರ್ಯ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿ, ಸಾವಿರಾರು ಜನರು ಸೇರಿ ಹಬ್ಬದಂತೆ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಬಣ್ಣ ಬಣ್ಣದ ಲೈಟಿಂಗ್ಸ್ ಹಾಕಿ, ಪುನೀತ್ ಅವರ ಅನೇಕ ಪೋಸ್ಟರ್ಗಳನ್ನು ಅಂಟಿಸಿ ಖುಷಿಪಡಲಾಗಿದೆ. ರಾಜ್ಯದ ಹಲವು ಊರುಗಳಿಂದ ಈ ರೀತಿಯ ಘಟನೆಗಳು ವರದಿ ಆಗುತ್ತಿರುವುದು ಅಪ್ಪು ಮೇಲಿನ ಅಪಾರವಾದ ಪ್ರೀತಿ-ಅಭಿಮಾನಕ್ಕೆ ಸಾಕ್ಷಿ. ಮಾ.17ರಂದು ಪುನೀತ್ ರಾಜ್ಕುಮಾರ್ ಜನ್ಮದಿನ. ಅಂದು ‘ಜೇಮ್ಸ್’ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಆ ಸಿನಿಮಾವನ್ನು ಬರಮಾಡಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ:
ಹೇಗಿದೆ ನೋಡಿ ಪುನೀತ್ ಕಟೌಟ್ ತಯಾರಿ; ‘ಜೇಮ್ಸ್’ ಚಿತ್ರದ ಅದ್ದೂರಿ ಬಿಡುಗಡೆಗೆ ದಿನಗಣನೆ
ಪಾದಯಾತ್ರೆಯಲ್ಲೂ ರಾರಾಜಿಸಿತು ಪುನೀತ್ ಫೋಟೋ; ಎಂದೂ ಮರೆಯಾಗದು ಅಪ್ಪು ಮೇಲಿನ ಅಭಿಮಾನ