ಅಪ್ಪು ನಿಧನರಾಗಿ ಕಳೆಯಿತು 9 ತಿಂಗಳು; ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಎಷ್ಟೇ ದಿನಗಳು ಕಳೆದರೂ ಪುನೀತ್ ರಾಜ್ಕುಮಾರ್ ಇಲ್ಲ ಎಂಬ ನೋವು ಕಡಿಮೆ ಆಗುವಂಥದ್ದಲ್ಲ. ಅಭಿಮಾನಿಗಳು ಮತ್ತು ಕುಟುಂಬದವರ ಮನದಲ್ಲಿ ‘ಪವರ್ ಸ್ಟಾರ್’ ಎಂದಿಗೂ ಶಾಶ್ವತ.
ಪ್ರತಿ ತಿಂಗಳು 29ನೇ ತಾರೀಕು ಬಂದರೆ ಅಪ್ಪು ಅಭಿಮಾನಿಗಳಿಗೆ ಆ ಕಹಿ ದಿನದ ನೆನಪು ಕಾಡುತ್ತದೆ. ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾದರು. ಈಗ ಅವರು ಇಲ್ಲದೇ 9 ತಿಂಗಳು ಕಳೆದಿದೆ. ಆ ಪ್ರಯುಕ್ತ ಇಂದು (ಜುಲೈ 29) ಅಪ್ಪು ಸಮಾಧಿಗೆ ಡಾ. ರಾಜ್ಕುಮಾರ್ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಸಮಾಧಿ ಸ್ಥಳಕ್ಕೆ ಬಂದು ನಮಿಸಿದ್ದಾರೆ. ವಿವಿಧ ಖಾದ್ಯಗಳನ್ನು ಅರ್ಪಿಸಲಾಗಿದೆ. ಅಭಿಮಾನಿಗಳು ಕೂಡ ಅಪ್ಪು ಸಮಾಧಿಗೆ (Puneeth Rajkumar Samadhi) ನಮಿಸಿ ನೆಚ್ಚಿನ ನಟನನ್ನು ಸ್ಮರಿಸಿಕೊಂಡಿದ್ದಾರೆ.