ವಿಜಯ್ ದೇವರಕೊಂಡ (Vijay Devarakonda) ಅವರಿಗೆ ಟಾಲಿವುಡ್ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅದೃಷ್ಟ ಬದಲಾಗಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ , ‘ಜೆಜಿಎಂ’ ಸಿನಿಮಾದಲ್ಲಿ (JGM Movie) ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ವಿಜಯ್ ಅವರು ಹೆಲಿಕಾಪ್ಟರ್ ಮೂಲಕ ಎಂಟ್ರಿ ನೀಡಿದರು. ಈ ಸಿನಿಮಾಗೆ ಪುರಿ ಜಗನ್ನಾಥ್ ಅವರ ನಿರ್ದೇಶನ ಮಾಡಲಿದ್ದಾರೆ. ಸದ್ಯ, ವಿಜಯ್ ನಟಿಸುತ್ತಿರುವ ‘ಲೈಗರ್’ ಚಿತ್ರಕ್ಕೂ (Liger Movie) ಪುರಿ ಜಗನ್ನಾಥ್ ಅವರದ್ದೇ ನಿರ್ದೇಶನ ಇದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಪ್ರಾಜೆಕ್ಟ್ಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದಂತಾಗಿದೆ. ವಿಜಯ್ ಅವರ ಎಂಟ್ರಿ ಹೇಗಿತ್ತು ಎಂಬುದಕ್ಕೆ ಈ ವಿಡಿಯೋ ನೋಡಿ. ‘ಲೈಗರ್’ ಚಿತ್ರದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿ. ಬಾಕ್ಸಿಂಗ್ ಕಥೆಯನ್ನು ಸಿನಿಮಾ ಹೊಂದಿದೆ.
ಇದನ್ನೂ ಓದಿ: JGM: ವಿಜಯ್ ದೇವರಕೊಂಡ- ಪುರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ಅನೌನ್ಸ್; ರಿಲೀಸ್ ಯಾವಾಗ?
JGM ಚಿತ್ರದಲ್ಲಿ ಸೈನಿಕನ ಅವತಾರ ತಾಳಿದ ವಿಜಯ್ ದೇವರಕೊಂಡ; ಇಲ್ಲಿವೆ ಫೋಟೋಗಳು