ಕಲಬುರಗಿಯ ಬುದ್ಧ ಮಂದಿರದಲ್ಲಿ 10-ಅಡಿ ಉದ್ದದ ಹೆಬ್ಬಾವು, ಉರಗ ತಜ್ಞರಿಂದ ರಕ್ಷಣೆ ಮತ್ತು ಕಾಡಿಗೆ ರವಾನೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2022 | 12:49 PM

ಮಾಹಿತಿಯನ್ನು ಸ್ಥಳೀಯ ಉರಗ ತಜ್ಞ ಪ್ರಶಾಂತ್ ಅವರಿಗೆ ನೀಡಿದ ಬಳಿಕ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಕಾಡು ಪ್ರದೇಶಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಕಲಬುರಗಿ: ಇದಕ್ಕೆ ಮುಂಚಿನ ವಿಡಿಯೋವೊಂದರಲ್ಲಿ ನಾವು ಕೋಲಾರ ಗ್ರಾಮವೊಂದರಲ್ಲಿ ನಾಗರ ಹಾವು ಕಾಣಿಸಿದ್ದರ ಬಗ್ಗೆ ವರದಿ ಮಾಡಿದ್ದೆವು. ಇದು ಕಲ್ಯಾಣ ಕರ್ನಾಟಕದ (Kalyana Karnataka) ಕಲಬುರಗಿಯಿಂದ (Kalaburagi) ಲಭ್ಯವಾಗಿರುವ ವಿಡಿಯೋ. ನಗರದ ಪ್ರಖ್ಯಾತ ಬುದ್ಧ ಮಂದಿರವನ್ನು ಸುಮಾರು 10 ಅಡಿ ಉದ್ದದ ಹೆಬ್ಬಾವು (python) ಪ್ರವೇಶಿಸಿದೆ. ಮಾಹಿತಿಯನ್ನು ಸ್ಥಳೀಯ ಉರಗ ತಜ್ಞ ಪ್ರಶಾಂತ್ ಅವರಿಗೆ ನೀಡಿದ ಬಳಿಕ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಕಾಡು ಪ್ರದೇಶಕ್ಕೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.