ಬಂಡಿಪುರ ಅಭಯಾರಣ್ಯ ಮೂಲಕ ಕಾರಲ್ಲಿ ಬರುತ್ತಿದ್ದ ದಂಪತಿ ಹುಲಿಯೊಂದು ತಮ್ಮ ಕಾರಿನ ಮುಂದೆ ಪ್ರತ್ಯಕ್ಷವಾದಾಗ ವಿಚಲಿತರಾಗಲಿಲ್ಲ!
ಹುಲಿಯ ಚಲನೆಯನ್ನು ಅವರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿದ್ದಾರೆ. ಅವರ ಸೌಜನ್ಯದಿಂದಲೇ ನಮಗೆ ಈ ವಿಡಿಯೋ ಲಭ್ಯವಾಗಿದೆ.
ಚಾಮರಾಜನಗರ: ಪಕ್ಕದ ರಾಜ್ಯ ಕೇರಳದಿಂದ ಚಾಮರಾಜನಗರ (Chamarajanagar) ಗುಂಡ್ಲುಪೇಟೆ ತಾಲ್ಲೂಕಿ ಬಂಡಿಪುರ ಹುಲಿ ಸಂರಕ್ಷಿತಾರಣ್ಯದ (tiger reserve) ಮೂಲಕ ಕರ್ನಾಟಕಕ್ಕೆ ರಸ್ತೆ ಮಾರ್ಗವಾಗಿ ಬರುತ್ತಿದ್ದ ದಂಪತಿಗೆ ತಮ್ಮ ಕಾರಿನ ಮುಂದೆ ಹುಲಿಯೊಂದು (tiger) ಪತ್ಯಕ್ಷವಾಗಿ, ‘ಈ ರಸ್ತೆ, ಈ ಪ್ರದೇಶ ನನಗೆ ಸೇರಿದ್ದು, ನೀವ್ಯಾಕೆ ಇಲ್ಲಿ?’ ಅನ್ನುವ ಹಾಗೆ ಘನ ಗಾಂಭೀರ್ಯದಿಂದ ನಡೆದು ಬರುವಾಗ ಅವರು ಹೆದರಿರುತ್ತಾರೆ ಅನ್ನೋದು ನಿಸ್ಸಂದೇಹ. ಆದರೆ ಭಯಗೊಂಡು ವಿಚಲಿತರಾಗಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಹುಲಿಯ ಚಲನೆಯನ್ನು ಅವರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿದ್ದಾರೆ. ಅವರ ಸೌಜನ್ಯದಿಂದಲೇ ನಮಗೆ ಈ ವಿಡಿಯೋ ಲಭ್ಯವಾಗಿದೆ.
Latest Videos