ಕೋಲಾರದ ಹೊದಲವಾಡಿ ಗ್ರಾಮದಲ್ಲಿ ಕಾಣಿಸಿಕೊಂಡಿತೊಂದು ಭಾರೀ ನಾಗರಹಾವು! ಉರಗ ತಜ್ಞರಿಂದ ರಕ್ಷಣೆ

ಕೋಲಾರದ ಹೊದಲವಾಡಿ ಗ್ರಾಮದಲ್ಲಿ ಕಾಣಿಸಿಕೊಂಡಿತೊಂದು ಭಾರೀ ನಾಗರಹಾವು! ಉರಗ ತಜ್ಞರಿಂದ ರಕ್ಷಣೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2022 | 11:01 AM

ಅದೇ ಭಾಗದಲ್ಲಿ ವಾಸಮಾಡುವ ಉರಗ ತಜ್ಞ ಅನಂದ್ ಸ್ಥಳಕ್ಕೆ ಬಂದು ಸರೀಸೃಪವನ್ನು ಒಂದು ಪ್ಲಾಸ್ಟಿಕ್ ಕ್ಯಾನಲ್ಲಿ ಕೈದು ಮಾಡಿ ಸುರಕ್ಷಿತವಾದ ಸ್ಥಳಕ್ಕೆ ಒಯ್ದು ಬಿಟ್ಟಿದ್ದಾರೆ.

ಕೋಲಾರ: ಜನವಸತಿ ಪ್ರದೇಶಗಳಿಗೆ ಹಾವುಗಳು (snakes) ನುಸುಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಅನ್ನೋದು ನಿಮ್ಮ ಗಮನಕ್ಕೆ ಬಂದಿರಬಹುದು. ಕೋಲಾರ (Kolar) ತಾಲ್ಲೂಕಿನ ಹೊದಲವಾಡಿ ಗ್ರಾಮದ ಸತೀಶ್ ಎನ್ನುವವರ ಮನೆಯಲ್ಲಿ ಶನಿವಾರ ಬೆಳಗ್ಗೆ ಬೃಹತ್ ಗಾತ್ರದ ನಾಗರಹಾವೊಂದು (cobra) ಕಾಣಿಸಿಕೊಂಡಿದೆ. ಅದರ ಹೆಡೆ ನೋಡಿ ಮಾರಾಯ್ರೇ, ನಮ್ಮ ಅಂಗೈಕ್ಕಿಂತ ಜಾಸ್ತಿ ಅಗಲವಿದೆ. ಅದೇ ಭಾಗದಲ್ಲಿ ವಾಸಮಾಡುವ ಉರಗ ತಜ್ಞ ಅನಂದ್ ಸ್ಥಳಕ್ಕೆ ಬಂದು ಸರೀಸೃಪವನ್ನು ಒಂದು ಪ್ಲಾಸ್ಟಿಕ್ ಕ್ಯಾನಲ್ಲಿ ಕೈದು ಮಾಡಿ ಸುರಕ್ಷಿತವಾದ ಸ್ಥಳಕ್ಕೆ ಒಯ್ದು ಬಿಟ್ಟಿದ್ದಾರೆ.