Karnataka Assembly Polls 2023: ರಾಮನಗರ ಜಿಲ್ಲೆಗೆ ಅಶೋಕ ಹೊಸಬರೇನೂ ಅಲ್ಲ, ಕನಕಪುರದಲ್ಲಿ ಗೆದ್ದೇ ಗೆಲ್ಲುತ್ತಾರೆ: ಸಿಪಿ ಯೋಗೇಶ್ವರ್

|

Updated on: Apr 14, 2023 | 12:54 PM

ಅಶೋಕರನ್ನು ಬಕ್ರಾ ಮಾಡಲಾಗಿದೆ ಎಂಬ ಆರೋಪವನ್ನು ಯೋಗೇಶ್ವರ್ ತಳ್ಳಿಹಾಕುತ್ತಾರೆ.

ರಾಮನಗರ: ಕನಕಪುರ (Kanakapura) ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸ್ಪರ್ಧಿಸುತ್ತಿರುವ ಸಚಿವ ಆರ್ ಅಶೋಕ (R Ashoka) ನಿಶ್ಚಯವಾಗಿ ಗೆಲ್ಲುತ್ತಾರೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮತ್ತು ಚನ್ನಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳುತ್ತಾರೆ. ಚನ್ನಪಟ್ಟಣದಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ಹತ್ತಾರು ವರ್ಷಗಳಿಂದ ಜನ ಶಿವಕುಮಾರ್ ಅವರಿಗೆ ವೋಟು ಹಾಕಿ ಬೇಸತ್ತಿದ್ದಾರೆ ಅವರಿಗೆ ಬದಲಾವಣೆ ಬೇಕಾಗಿದೆ, ಅದೂ ಅಲ್ಲದೆ ಅಶೋಕ ಪ್ರಬಲ ನಾಯಕರಾಗಿದ್ದಾರೆ ಮತ್ತು ರಾಮನಗರ ಜಿಲ್ಲೆ ಅವರಿಗೆ ಹೊಸದೇನೂ ಅಲ್ಲ, ಅವರ ರಾಜಕೀಯ ಬದುಕು ಶುರುವಾಗಿದ್ದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎನ್ನುತ್ತಾರೆ. ಅಶೋಕರನ್ನು ಬಕ್ರಾ ಮಾಡಲಾಗಿದೆ ಎಂಬ ಆರೋಪವನ್ನು ಯೋಗೇಶ್ವರ್ ತಳ್ಳಿಹಾಕುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ