Oppo A1 5G: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ ಒಪ್ಪೊ ಹೊಸ ಫೋನ್

Oppo A1 5G: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ ಒಪ್ಪೊ ಹೊಸ ಫೋನ್

ಕಿರಣ್​ ಐಜಿ
|

Updated on: Apr 15, 2023 | 9:31 AM

ಒಪ್ಪೊ ಎ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಒಪ್ಪೊ A1 5G ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಒಪ್ಪೊ ಫೋನ್ ಕುರಿತ ವಿವರಗಳು ಈ ವಿಡಿಯೊದಲ್ಲಿದೆ. ಒಪ್ಪೋ A1 5G ಸ್ಮಾರ್ಟ್‌ಫೋನ್‌ 6.71 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ.

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೊಸತನಕ್ಕೆ ಏನೂ ಕಡಿಮೆಯಿಲ್ಲ. ದಿನವೂ ನೂತನ ಮಾದರಿಗಳು, ವಿನ್ಯಾಸದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತವೆ. ಅದರಲ್ಲೂ ಚೀನಾ ಮೂಲದ ಕಂಪನಿಗಳು ವಿವಿಧ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು ಸ್ಪರ್ಧೆಗೆ ಬಿದ್ದವರಂತೆ ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿವೆ. ಈ ಬಾರಿ, ಒಪ್ಪೊ, ಸ್ಮಾರ್ಟ್​ಫೋನ್ ಲೋಕಕ್ಕೆ ನೂತನ ಮಾದರಿಯನ್ನು ಬಿಡುಗಡೆ ಮಾಡಿದೆ. ಒಪ್ಪೊ ಎ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಒಪ್ಪೊ A1 5G ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಒಪ್ಪೊ ಫೋನ್ ಕುರಿತ ವಿವರಗಳು ಈ ವಿಡಿಯೊದಲ್ಲಿದೆ. ಒಪ್ಪೋ A1 5G ಸ್ಮಾರ್ಟ್‌ಫೋನ್‌ 6.71 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಒಪ್ಪೊ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ ಬೆಂಬಲ ಹೊಂದಿದ್ದು, 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವಿದೆ. 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮೊನೊ ಸೆನ್ಸಾರ್‌ ಒಪ್ಪೊ ಫೋನ್​ನಲ್ಲಿದೆ. ಸೆಲ್ಫೀ, ವಿಡಿಯೋ ಕರೆಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 67W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲವಿದೆ. ಮುಂದಿನ ತಿಂಗಳು ಈ ಸ್ಮಾರ್ಟ್​ಫೋನ್ ಭಾರತಕ್ಕೆ ಬರುವ ನಿರೀಕ್ಷೆಯಿದ್ದು, ಓಷನ್ ಬ್ಲೂ, ಸ್ಯಾಂಡ್‌ಸ್ಟೋನ್ ಬ್ಲಾಕ್ ಮತ್ತು ಕ್ಯಾಬೇರಿಯಾ ಆರೆಂಜ್ ಕಲರ್‌ ಆಯ್ಕೆ ಇದೆ.