ಆರ್ಥಿಕತೆ ಬಗ್ಗೆ ಸಿದ್ದರಾಮಯ್ಯಗೆ ಪ್ರಶ್ನೆ ಕೇಳುವ ಮೊದಲು ಅಶೋಕ ಹೋಮ್​ವರ್ಕ್ ಮಾಡಿರಬೇಕು: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

|

Updated on: Nov 29, 2023 | 5:02 PM

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಿದ್ದರಾಮಯ್ಯನವರಿಗೆ ಸದನದಲ್ಲಿ ಪ್ರಶ್ನೆ ಕೇಳುವಾಗ ತಜ್ಞರೊಂದಿಗೆ ಚರ್ಚಿಸಿ ಅಂಕಿ ಅಂಶಗಳನ್ನು ಬರೆದುಕೊಂಡು ಬರುವಂತೆ ಅಶೋಕ್ ಅವರಿಗೆ ಲಕ್ಷ್ಮಣ್ ಹೇಳಿದರು. ಈ ವಿಷಯಗಳಲ್ಲಿ ಪರಿಣಿತಿ ಹೊಂದಿರುವ ಸಿದ್ದರಾಮಯ್ಯನವರು ಅಶೋಕ್ ಕೇಳುವ ಪ್ರಶ್ನೆಗಳನ್ನು ಒಂದೇ ವಾಕ್ಯದಲ್ಲಿ ಹೊಡೆದುಹಾಕುತ್ತಾರೆ ಎಂದು ಕೆಪಿಸಿಸಿ ವಕ್ತಾರ ಹೇಳಿದರು.

ಮೈಸೂರು: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್ ಅಶೋಕ (R Ashoka) ಅವರಿಗೆ ಕೆಲ ಸವಾಲುಗಳನ್ನು ಎಸೆದರು. ಬಿಜೆಪಿ ಸರ್ಕಾರ (BJP government) ಅಧಿಕಾರದಲ್ಲಿದ್ದಾಗ 2022-2023 ಸಾಲಿಗೆ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನಲ್ಲಿ ರೂ. 32,000 ಕೋಟಿ ಯನ್ನು ಅಲೋಕೇಟ್ ಮಾಡಲಾಗಿತ್ತು. ಆದರೆ ಹತ್ತು ಪರ್ಸೆಂಟ್ ಕಮೀಷನ್ ಗಾಗಿ ಬಿಜೆಪಿ ಸರ್ಕಾರ ರೂ. 95, 457 ಕೋಟಿ ಗಳಿಗೆ ಟೆಂಡರ್ ಗಳನ್ನು ಮಾರಾಟ ಮಾಡಿಕೊಂಡಿತ್ತು ಎಂದು ಲಕ್ಷ್ಮಣ್ ಹೇಳಿದರು. ಬಜೆಟ್ ನಲ್ಲಿ ಅಲೋಕೇಟ್ ಮಾಡಿದ್ದರ ಮೂರು ಪಟ್ಟು ಹಣಕ್ಕೆ ಟೆಂಡರ್ ಗಳನ್ನು ಮಾರಿಕೊಳ್ಳಲಾಗಿತ್ತು ಅಂತ ಹೇಳಿದ ಅವರು ಜಲಸಂಪನ್ಮೂಲ ಇಲಾಖೆಯ ಟೆಂಡರ್ ಗಳನ್ನು ಒಂದು ಲಕ್ಷ ಕೋಟಿ ರೂ. ಗಳಿಗೆ ಮಾರಿಕೊಳ್ಳಲಾಗಿತ್ತು ಅಂದರು. ಬೆಳಗಾವಿ ವಿಧಾನ ಸಭಾ ಅಧವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ಲಕ್ಷ್ಮಣ್ ವಿರೋಧ ಪಕ್ಷದ ನಾಯಕನಿಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ