Karnataka Assembly Polls; ನಾನು ಬಜರಂಗ ದಳದ ಸದಸ್ಯ, ತಾಕತ್ತಿದ್ರೆ ಕಾಂಗ್ರೆಸ್ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ: ಅರ್ ಅಶೋಕ

|

Updated on: May 04, 2023 | 2:30 PM

ಆ ಆಂಜನೇಯ ಬಾಲಕ್ಕೆ ಬೆಂಕಿ ಹತ್ತಿದಾಗ ಲಂಕೆಯನ್ನು ಸುಟ್ಟಂತೆಯೇ ಕಾಂಗ್ರೆಸ್ ಹಚ್ಚಿರುವ ಬೆಂಕಿ ಆ ಪಕ್ಷವನ್ನೇ ಅಗ್ನಿಗಾಹುತಿ ಮಾಡಲಿದೆ ಎಂದು ಅಶೋಕ ಹೇಳಿದರು.

ರಾಮನಗರ: ಬಜರಂಗ ದಳವನ್ನು ಬ್ಯಾನ್ ಮಾಡುವ ಅಂಶವನ್ನು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ (manifesto) ಸೇರಿಸಿದ್ದು ದೇಶದಾದ್ಯಂತ ಚರ್ಚೆಯಾಗುತ್ತಿದೆ ಮತ್ತು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಕಟುವಾಗಿ ಟೀಕಿಸುತ್ತಿವೆ. ಕನಕಪುರ ಕ್ಷೇತ್ರದಲ್ಲಿ ಇಂದು ಪ್ರಚಾರ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ (R Ashoka) ಶಿವನಹಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ, ತಾನು ಬಜರಂಗ ದಳದ ಸದಸ್ಯ, ಕಾಂಗ್ರೆಸ್ ನಾಯಕರಿಗೆ ದಮ್ಮಿದ್ರೆ, ತಾಕತ್ತಿದ್ರೆ ಕ್ರಮ ಜರುಗಿಸಲಿ ನೋಡೋಣ ಅಂತ ಸವಾಲೆಸೆದರು. ಕಾಂಗ್ರೆಸ್ ನವರು ಆಂಜನೇಯನ ಬಾಲಕ್ಕೆ ಹಚ್ಚಿದ್ದಾರೆ, ಆ ಆಂಜನೇಯ ಬಾಲಕ್ಕೆ ಬೆಂಕಿ ಹತ್ತಿದಾಗ ಲಂಕೆಯನ್ನು ಸುಟ್ಟಂತೆಯೇ ಕಾಂಗ್ರೆಸ್ ಹಚ್ಚಿರುವ ಬೆಂಕಿ ಆ ಪಕ್ಷವನ್ನೇ ಅಗ್ನಿಗಾಹುತಿ ಮಾಡಲಿದೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 04, 2023 02:30 PM