Karnataka Assembly Polls: ಡಿಕೆ ಶಿವಕುಮಾರ್ ಹೊತ್ತ ಹೆಲಿಕಾಪ್ಟರ್ ಲ್ಯಾಂಡ್ ಆದ ಹೆಲಿಪ್ಯಾಡ್ ಬಳಿ ಬೆಂಕಿ, ಸ್ಮೋಕ್ ಕ್ಯಾಂಡಲ್ ಹೊತ್ತಿ ಉರಿದು ಅವಾಂತರ!
ಹೆಲಿಪ್ಯಾಡ್ ಇರುವ ಸ್ಥಳವನ್ನು ಗೊತ್ತು ಮಾಡಲು ಉಪಯೋಗಿಸುವ ಸ್ಮೋಕ್ ಕ್ಯಾಂಡಲ್ ಗೆ ಬೆಂಕಿ ಹೊತ್ತಿಕೊಂಡುಬಿಟ್ಟಿತ್ತು.
ಕಾರವಾರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಹೆಲಿಕಾಪ್ಟರ್ ಪ್ರಯಾಣ ಸರಿಬರುತ್ತಿಲ್ಲ ಅನಿಸುತ್ತೆ. ಇಂದು ಅವರು ಹೊನ್ನಾವರಕ್ಕೆ (Honnavar) ಹತ್ತಿರವಿರುವ ರಾಮತೀರ್ಥಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದಾಗ ಹೆಲಿಪ್ಯಾಡ್ (helipad) ನಿರ್ಮಿಸಲಾಗಿದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಿವಕುಮಾರ್ ಮೈಸೂರಿಂದ ಹೊನ್ನಾವರಕ್ಕೆ ಆಗಮಿಸಿದಾಗ ಈ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ ಹೆಲಿಪ್ಯಾಡ್ ಇರುವ ಸ್ಥಳವನ್ನು ಗೊತ್ತು ಮಾಡಲು ಉಪಯೋಗಿಸುವ ಸ್ಮೋಕ್ ಕ್ಯಾಂಡಲ್ ಗೆ ಬೆಂಕಿ ಹೊತ್ತಿಕೊಂಡುಬಿಟ್ಟಿತ್ತು. ಅಗ್ನಿಶಾಮಕ ದಳದವರು ಕೂಡಲೇ ಬೆಂಕಿ ನಂದಿಸಿದ್ದಾರೆ. ನಿಮಗೆ ಗೊತ್ತಿದೆ, ಎರಡು ದಿನಗಳ ಹಿಂದೆ ಶಿವಕುಮಾರ್ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ನಿಂದ ಮುಳುಬಾಗಿಲುಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಗೆ ಒಂದು ರಣಹದ್ದು ಹಾರಿಬಂದು ಅಪ್ಪಳಿಸಿದ್ದರಿಂದ ಗಾಜು ಪುಡಿಯಾಗಿತ್ತು. ಶಿವಕುಮಾರ್ ಅವರೊಂದಿಗೆ ಟವಿ9 ವರದಿಗಾರ ಮತ್ತು ಕೆಮೆರಾಮನ್ ಕೂಡ ಇದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

