Karnataka Assembly Elections 2023: ಪದ್ಮನಾಭನಗರದಲ್ಲಿ ಆರ್ ಅಶೋಕ್ ಸೋಲಿಸಲು ಡಿಕೆ ಶಿವಕುಮಾರ್ ಸರ್ವ ತಂತ್ರ

ಸ್ವಂತ ಅಖಾಡದಲ್ಲಿಯೇ ಸಾಮ್ರಾಟ ಅಶೋಕ್​ಗೆ ಖೆಡ್ಡ ತೋಡಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಸಾಮ್ರಾಟರನ್ನೇ ಕನ್ಫ್ಯೂಸ್ ಮಾಡ್ತಿದ್ದಾರೆ.

Karnataka Assembly Elections 2023: ಪದ್ಮನಾಭನಗರದಲ್ಲಿ ಆರ್ ಅಶೋಕ್ ಸೋಲಿಸಲು ಡಿಕೆ ಶಿವಕುಮಾರ್ ಸರ್ವ ತಂತ್ರ
ಡಿಕೆ ಶಿವಕುಮಾರ್, ಆರ್ ಅಶೋಕ್
Follow us
ಆಯೇಷಾ ಬಾನು
|

Updated on:Apr 14, 2023 | 8:41 AM

ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದ(Karnataka Assembly Elections 2023) ಕದನಕಣದಲ್ಲಿ ಅಸಲಿ ಯುದ್ಧ ಈಗ ಶುರುವಾಗಿದೆ. ಚುನಾವಣೆಯ ಅಖಾಡದಲ್ಲಿ ಬದ್ಧವೈರಿಗಳ ಕಾದಾಟ ಶುರುವಾಗಿದೆ. ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಹಾಗೂ ಆರ್ ಅಶೋಕ್(R Ashok) ಸ್ಪರ್ಥಿಸಲಿದ್ದಾರೆ. ಸ್ವಂತ ಅಖಾಡದಲ್ಲಿಯೇ ಸಾಮ್ರಾಟ ಅಶೋಕ್​ಗೆ ಖೆಡ್ಡ ತೋಡಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಸಾಮ್ರಾಟರನ್ನೇ ಕನ್ಫ್ಯೂಸ್ ಮಾಡ್ತಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಟ್ವಿಸ್ಟ್, ಟರ್ನ್ ಶಾಕ್ ಮೂಲಕ ಆರ್ ಅಶೋಕ್​ಗೆ ಗೊಂದಲ ಮೂಡಿಸುವ ಯತ್ನ ಮಾಡಲಾಗಿದೆ. ಮೊದಲಿಗೆ ಪದ್ಮನಾಭನಗರದಲ್ಲಿ ಡಿಕೆ ಸುರೇಶ್ ರನ್ನು ಕಣಕ್ಕಿಳಿಸಿ ಆರ್ ಅಶೋಕ್​ರನ್ನು ಕಟ್ಟಿ ಹಾಕ್ತಾರೆ ಎಂಬ ವದಂತಿ ಹಬ್ಬಿತ್ತು. ಮತ್ತೊಂದೆಡೆ ಡಿಕೆ ಸುರೇಶ್ ಬಂದರೆ ತಮ್ಮ ಸ್ಥಾನ ತ್ಯಾಗ ಮಾಡ್ತೀನಿ ಎಂದು ಘೋಷಿತ ಅಭ್ಯರ್ಥಿ ರಘುನಾಥ ನಾಯ್ಡು ಸಿದ್ದವಾಗಿದ್ದರು. ಇದರ ಜೊತೆಗೆ ಪದ್ಮನಾಭ ನಗರದಲ್ಲಿ ಅರಿತ್ಮೇಟಿಕ್ ಕೆಲಸ ಮಾಡತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಎಲ್ಲಾ ನಡೆಗಳಿಂದ ಬಿಜೆಪಿಗೆ ಕನ್ಫ್ಯೂಸ್ ಮಾಡಲು ಡಿಕೆಶಿ ಪಡೆ ಮುಂದಾಗಿದೆ.

ಇದನ್ನೂ ಓದಿ: Karnataka Assembly Election 2023: ಸಿಎಂ ಬೊಮ್ಮಾಯಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಕಣಕ್ಕೆ, ಇದು ಅವರ 234ನೇ ಚುನಾವಣೆ

ಮತದಾರರ ಪಟ್ಟಿ ಹಿಡಿದುಕೊಂಡು ಅಶೋಕ್ ಮಣಿಸಲು ಸರ್ವ ತಂತ್ರ ಹೆಣೆಯಲಾಗಿದೆ. ಪದ್ಮನಾಭ ನಗರದಲ್ಲಿ ನಾಯ್ಡು ಮತದಾರರ ಸಂಖ್ಯೆ ಹೇರಳವಾಗಿದೆ. ನಾಯ್ಡು ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಅಭ್ಯರ್ಥಿಗೆ ಸೂಚನೆ ನೀಡಲಾಗಿದೆ. ಆರ್ ಅಶೋಕ್ ಜೊತೆಗೇ ಇದ್ದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳಿಗೆ ಗಾಳ ಹಾಕಲಾಗುತ್ತಿದೆ. ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಪದ್ಮನಾಭ ನಗರದ ಪ್ರಮುಖ ಕಾರ್ಪೋರೇಟರ್​ಗಳಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಆರ್ ಅಶೋಕ್ ವಿರುದ್ದವಾಗಿ ಬಿಜೆಪಿ ಕಾರ್ಪೋರೇಟರ್ ಗಳು ಕೆಲಸ ಮಾಡುವ ಸಾಧ್ಯತೆ ಇದೆ. ಈ ಮೂಲಕ ಆರ್ ಅಶೋಕ್ ಗೆ ಒಳ ಏಟಿನ ಮರ್ಮಾಘಾತ ನೀಡಲು ಡಿಕೆಶಿ ಸ್ಕೆಚ್ ಹಾಕಿದ್ದಾರೆ. ಅಲ್ಲದೆ ಪದ್ಮನಾಭ ನಗರದಲ್ಲಿ ಹೆಚ್ಚು ವಾಸವಾಗಿರುವ ಮೂಲ ಕನಕಪುರದ ನಿವಾಸಿಗಳನ್ನು ಕ್ಷೇತ್ರದಲ್ಲಿ ಒಗ್ಗೂಡಿಸುವಂತೆ ಡಿಕೆಶಿ ರಘುನಾಥ್ ನಾಯ್ಡುಗೆ ಸೂಚನೆ ನೀಡಿದ್ದಾರೆ.

ಡಿಕೆಶಿ ಸಂಬಂಧಿ ಪರಿಷತ್ ಸದಸ್ಯ ಎಸ್ ರವಿಯನ್ನು ಪದ್ಮನಾಭ ನಗರದಲ್ಲಿ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಪದ್ಮನಾಭ ನಗರದಲ್ಲಿ ಪಕ್ಷೇತರರಾಗಿ ಯಾವುದಾದರೂ ಒಕ್ಕಲಿಗ ಪ್ರಬಲ ಅಭ್ಯರ್ಥಿ ಯನ್ನು ಆರ್ ಅಶೋಕ್ ವಿರುದ್ದವಾಗಿ ಕಣಕ್ಕೆ ಇಳಿಸುವ ಚಿಂತನೆ ನೀಡಲಾಗಿದೆ. ಈ ಮೂಲಕ ಪದ್ಮನಾಭ ನಗರವನ್ನು ಅಶೋಕ್ ಬಿಡಬಾರದು ಕನಕಪುರಕ್ಕೂ ಎಂಟ್ರಿ ಕೊಡಬಾರದು ಹೀಗೆ ಡಿಕೆಶಿ ಸಹೋದರರು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:41 am, Fri, 14 April 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?