R Ashwin: ಭಾರತ-ಆಫ್ರಿಕಾ 2ನೇ ಟೆಸ್ಟ್ ಮೊದಲ ದಿನದಾಟದ ಬಳಿಕ ಅಶ್ವಿನ್ ಸುದ್ದಿಗೋಷ್ಠಿ: ಏನಂದ್ರು ಕೇಳಿ

| Updated By: Vinay Bhat

Updated on: Jan 04, 2022 | 9:02 AM

South Africa vs India: ಮೊದಲ ದಿನದಾಟದ ಮುಕ್ತಾಯದ ನಂತರ ರವಿಚಂದ್ರನ್ ಅಶ್ವಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಇಂಜುರಿ ಕುರಿತು ಅಪ್ಡೇಟ್ ನೀಡಿದ್ದಾರೆ.

ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಎರಡನೇ ಟೆಸ್ಟ್ ಪಂದ್ಯ (2nd Test) ಮೊದಲ ದಿನವೇ ಸಾಕಷ್ಟು ವಿಚಾರಗಳಿಗೆ ಕುತೂಹಲ ಕೆರಳಿಸಿತು. ಖಾಯಂ ನಾಯಕ ವಿರಾಟ್ ಕೊಹ್ಲಿ (Virat Kohli) ಇಂಜುರಿಯಿಂದ ಹೊರಗುಳಿದ ಪರಿಣಾಮ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಜವಾಬ್ದಾರಿ ಹೊರಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಪರ ನಾಯಯಕನ ಹೊರತಾಗಿ ಉಳಿದ ಬ್ಯಾಟರ್​ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ ಮಾಡಲಿಲ್ಲ. ಆರ್. ಅಶ್ವಿನ್ (R Ashwin) ಕೊಂಚ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಿತು ಎನ್ನಬಹುದು. ಅಂತಿಮವಾಗಿ 202 ರನ್​​ಗೆ ಭಾರತ ಸರ್ವಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್​ಗಳ ಹಿನ್ನಡೆಯಲ್ಲಿದೆ. ಮೊದಲ ದಿನದಾಟದ ಮುಕ್ತಾಯದ ನಂತರ ರವಿಚಂದ್ರನ್ ಅಶ್ವಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಇಂಜುರಿ ಕುರಿತು ಅಪ್ಡೇಟ್ ನೀಡಿದ್ದಾರೆ.

Mohammed Siraj Injury: ಭಾರತಕ್ಕೆ ಶಾಕ್ ಮೇಲೆ ಶಾಕ್: ಇಂದು ಈ ಆಟಗಾರ ಕಣಕ್ಕಿಳಿಯುವುದು ಅನುಮಾನ

South Africa vs India: ವಾವ್ ವಾಂಡರರ್ಸ್ ಪಿಚ್: ಮತ್ತಷ್ಟು ರೋಚಕತೆ ಪಡೆಯಲಿದೆ ಇಂದಿನ ಎರಡನೇ ದಿನದಾಟ

(R Ashwin addressed a virtual press conference in Johannesburg after Day 1 of the 2ndTest against South Africa)

Published on: Jan 04, 2022 09:01 AM