‘ಕೆಡಿ’ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು: ಆರ್. ಚಂದ್ರು ಮೆಚ್ಚುಗೆ

Updated on: May 03, 2026 | 2:40 PM

ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ಸೆಲೆಬ್ರಿಟಿ ಶೋ ನಡೆದಿದೆ. ಸಿನಿಮಾ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಆರ್. ಚಂದ್ರು, ಪ್ರಮೋದ್ ಶೆಟ್ಟಿ, ಉಪೇಂದ್ರ, ತರುಣ್ ಸುಧೀರ್, ಪಿ. ರವಿಶಂಕರ್ ಮುಂತಾದವರು ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆರ್. ಚಂದ್ರು ಅವರು ವಿಮರ್ಶೆ ಹಂಚಿಕೊಂಡಿದ್ದಾರೆ.

‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ನಡೆದಿದೆ. ಚಿತ್ರ ನೋಡಿದ ಅನೇಕರು ಭೇಷ್ ಎಂದಿದ್ದಾರೆ. ಆರ್. ಚಂದ್ರು, ಪ್ರಮೋದ್ ಶೆಟ್ಟಿ, ಉಪೇಂದ್ರ, ತರುಣ್ ಸುಧೀರ್, ಮಿಲನಾ ನಾಗರಾಜ್, ಮಾನ್ವಿತಾ ಹರೀಶ್, ಪಿ. ರವಿಶಂಕರ್, ಎಸ್. ಮಹೇಂದರ್ ಮುಂತಾದವರು ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆರ್. ಚಂದ್ರು ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಈ ರೀತಿಯ ಸಿನಿಮಾ ಮಾಡೋಕೆ ತುಂಬಾ ಗುಂಡಿಗೆ ಬೇಕು. ಅಷ್ಟು ದೊಡ್ಡ ದೃಶ್ಯಕಾವ್ಯವನ್ನು ಕಟ್ಟಿಕೊಡುವುದು ಸುಲಭ ಅಲ್ಲ. ಅದಕ್ಕೆ ಎಷ್ಟು ಶ್ರಮ ಇದೆ ಅಂತ ನನಗೆ ಗೊತ್ತಿದೆ. ಇದು ನಮ್ಮ ಕನ್ನಡದ ಹೆಮ್ಮೆ. ಎಲ್ಲರೂ ಬಂದು ಸಿನಿಮಾ ನೋಡಬೇಕು. ಈ ರೀತಿ ಸಿನಿಮಾ ಮಾಡೋಕೆ ತುಂಬಾ ತಾಕತ್ತು ಬೇಕು. ಪಾರ್ಟ್ 2 ನೋಡಲು ಕಾಯುತ್ತಿದ್ದೇನೆ’ ಎಂದು ಆರ್. ಚಂದ್ರು (R Chandru) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More