‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
R Chandru: ಉಪೇಂದ್ರ ಅವರ ‘ಕಬ್ಜ’ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಆರ್ ಚಂದ್ರು, ಇತ್ತೀಚೆಗಷ್ಟೆ ಬಿಡುಗಡೆ ಆದ ಉಪೇಂದ್ರ ಅವರ ನಿರ್ದೇಶನದ ‘ಯುಐ’ ಸಿನಿಮಾ ವೀಕ್ಷಿಸಿದ್ದಾರೆ. ಉಪೇಂದ್ರ ಅವರ ಪ್ರತಿಭೆಯನ್ನು ಕೊಂಡಾಡಿರುವ ಆರ್ ಚಂದ್ರು, ಉಪೇಂದ್ರ ಅವರನ್ನು ಆಧುನಿಕ ಬುದ್ಧ ಎಂದು ಕರೆದಿದ್ದಾರೆ.
ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ನಿನ್ನೆ (ಡಿಸೆಂಬರ್ 20) ಬಿಡುಗಡೆ ಆಗಿದೆ. ಸಿನಿಮಾ ನೋಡಿದವರು ಭಿನ್ನ-ಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪ್ರೇಕ್ಷಕರು ಮಾತ್ರವೇ ಅಲ್ಲದೆ ಹಲವು ಸಿನಿಮಾ ನಿರ್ದೇಶಕರು ಸಹ ‘ಯುಐ’ ಸಿನಿಮಾಕ್ಕಾಗಿ ಕಾಯುತ್ತಿದ್ದರು. ಅದರಲ್ಲಿ ನಿರ್ದೇಶಕ ಆರ್ ಚಂದ್ರು ಸಹ ಒಬ್ಬರು. ‘ಯುಐ’ ಸಿನಿಮಾ ವೀಕ್ಷಿಸಿದ ನಿರ್ದೇಶಕ ಆರ್ ಚಂದ್ರು, ಉಪೇಂದ್ರ ಬಗ್ಗೆ ‘ಯುಐ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕಂದಿನಿಂದಲೂ ಉಪೇಂದ್ರ ಅವರ ಅಭಿಮಾನಿ ಎಂದಿರುವ ಚಂದ್ರು, ಉಪೇಂದ್ರ ಅವರನ್ನು ಆಧುನಿಕ ಬುದ್ಧ ಎಂದು ಕರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 22, 2024 01:59 PM