ಹುಟ್ಟುಹಬ್ಬದ ನೆಪದಲ್ಲಿ ಮತದಾರರಿಗೆ ಭರ್ಜರಿ ಮಾಂಸದೂಟ: ತಿಂದಿದ್ದು ಸ್ವಲ್ಪ, ಚೆಲ್ಲಿದೇ ಹೆಚ್ಚು

|

Updated on: Mar 19, 2023 | 11:06 PM

ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿರುವ ಆರ್.ಶಂಕರ್ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಕ್ಷೇತ್ರದ ಮತದಾರರಿಗೆ ಭರ್ಜರಿ ಮಾಂಸದೂಟ.

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿರುವ ಆರ್.ಶಂಕರ್ (R. Shankar) ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಕ್ಷೇತ್ರದ ಮತದಾರರಿಗೆ ಭರ್ಜರಿ ಮಾಂಸದೂಟ ಆಯೋಜನೆ ಮಾಡಿದ್ದರು. 5 ಟನ್ ಚಿಕನ್, 261 ಕುರಿಗಳ ಮಾಂಸದೂಟ ಸೇರಿದಂತೆ ಮೊಟ್ಟೆ ಊಟ ಮಾಡಿಸಿದ್ದರು. ಆದರೆ ಜನರು ಮಾತ್ರ ಅರ್ಧಂಬರ್ಧ ಊಟ ಮಾಡಿ, ಅಡಿಕೆ ತಟ್ಟೆಗಳನ್ನ ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದಾರೆ. ಔತಣಕೂಟ ಆಯೋಜನೆ ಮೂಲಕ ಮತದಾರರ ಓಲೈಕೆಗೆ ಆರ್.ಶಂಕರ್ ನಾನಾ ಕಸರತ್ತು ನಡೆಸುತ್ತಿದ್ದಾರೆ.  ಈಗಾಗಲೇ ಶಾಲಾ ಮಕ್ಕಳಿಗೆ ಬ್ಯಾಗ್, ಗೃಹಿಣಿಯರಿಗೆ ಸೀರೆ, ಕುಕ್ಕರ್ ಹಂಚಿಕೆ ಮಾಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Mar 19, 2023 11:06 PM