ಬಿಜೆಪಿ ಜನಸಂಕಲ್ಪ ಸಮಾವೇಶದಿಂದ ಅಂತರ ಕಾಯ್ದುಕೊಂಡ ಎಂಎಲ್​ಸಿ ಆರ್​ ಶಂಕರ್

ಗಂಗಾಧರ​ ಬ. ಸಾಬೋಜಿ

|

Updated on:Mar 19, 2023 | 5:34 PM

ಪೂರ್ವನಿಗದಿ ಹಿನ್ನೆಲೆ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದಾಗಲೆಲ್ಲ ಪಕ್ಷೇತರರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಮತ್ತೆ ರಿಪೀಟ್ ಆಗಲಿದೆ ಎಂದು ಎಂಎಲ್​ಸಿ ಆರ್.ಶಂಕರ್ ಹೇಳಿದರು.

ಬಿಜೆಪಿ ಜನಸಂಕಲ್ಪ ಸಮಾವೇಶದಿಂದ ಅಂತರ ಕಾಯ್ದುಕೊಂಡ ಎಂಎಲ್​ಸಿ ಆರ್​ ಶಂಕರ್
ಎಂಎಲ್​ಸಿ ಆರ್.ಶಂಕರ್
Image Credit source: varthabharati

ರಾಣೇಬೆನ್ನೂರು: ನಗರದಲ್ಲಿ ಪೂರ್ವನಿಗದಿ ಹಿನ್ನೆಲೆ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದಾಗಲೆಲ್ಲ ಪಕ್ಷೇತರರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಮತ್ತೆ ರಿಪೀಟ್ ಆಗಲಿದೆ ಎಂದು ಎಂಎಲ್​ಸಿ ಆರ್.ಶಂಕರ್ (BJP MLC R. Shankar) ಹೇಳಿದರು. ಜಿಲ್ಲೆಯ ರಾಣೇಬೆನ್ನೂರಿನಲ್ಲಿ ತಮ್ಮ ಹಾಗೂ ಮೊಮ್ಮಗನ ಬರ್ತ್​​ಡೇ ನಿಮಿತ್ತ ಆಯೋಜಸಿದ್ದ ಔತಣಕೂಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಪಕ್ಷದಿಂದ ಟಿಕೆಟ್ ಕೊಟ್ಟರು ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು. ಇನ್ನು ಹುಟ್ಟುಹಬ್ಬ ಹಿನ್ನೆಲೆ ಚಿಕನ್, ಮಟನ್ ಜೊತೆಗೆ ಸಿಹಿ ಊಟದ ವ್ಯವಸ್ಥೆಯೂ ಮಾಡಿದ್ದೇವೆ. ಕ್ಷೇತ್ರದ ಜನರ ಜೊತೆ ನಮ್ಮ ಖುಷಿ ಹಂಚಿಕೊಳ್ಳಲು ಆಯೋಜಿಸಿದ್ದೇವೆ. ರಾಣೇಬೆನ್ನೂರು ಕ್ಷೇತ್ರದ ಹಳ್ಳಿಗಳಿಂದ ನಿರೀಕ್ಷೆ ಮೀರಿ ಜನ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಆರ್​.ಶಂಕರ್ ವಿರುದ್ಧ ಎಫ್​ಐಆರ್ ದಾಖಲು

ಇನ್ನು ಇತ್ತೀಚೆಗೆ ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ಸಂಬಂಧ ಆರ್​.ಶಂಕರ್ ವಿರುದ್ಧ ಜಿಲ್ಲೆಯ ರಾಣೇಬೆನ್ನೂರು ಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ಎಂಎಸ್​ಸಿ ಶಂಕರ್ ಅವರು ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್​ ಗುರು ಬಸವರಾಜ ಅವರು ಠಾಣೆಗೆ ದೂರು ನೀಡಿದ್ದು, ಮತದಾರರಿಗೆ ಕುಕ್ಕರ್​, ಸೀರೆ ಹಂಚಿಕೆ ಮಾಡಿದ್ದಾರೆಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ತಾರಾಲಯ ಲೋಕಾರ್ಪಣೆ ವಿಷಯದಲ್ಲಿ ಕಾಂಗ್ರೆಸ್​- ಬಿಜೆಪಿ ನಡುವೆ ವಾರ್: ಹೆಚ್​​ಕೆ ಪಾಟೀಲ್ ವಿರುದ್ಧ ಸಂಕನೂರ ಕಿಡಿ

ತಹಶೀಲ್ದಾರ್ ನೀಡಿದ ದೂರಿನ ಅನ್ವಯ ಪೊಲೀಸರು ಎಂಎಲ್​ಸಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಮಾರ್ಚ್​ 14ರಂದು ರಾತ್ರಿ ಆರ್​.ಶಂಕರ್ ಕಚೇರಿ ಮೇಲೆ ಹಾವೇರಿ ಎಸಿ, ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕ ಮಾಹಿತಿಯನ್ನು ಕಂದಾಯ ಇಲಾಖೆ ಕೋರ್ಟ್​ಗೆ ಸಲ್ಲಿಸಿತ್ತು. ಕೋರ್ಟ್ ಅನುಮತಿಯಂತೆ ದೂರು ಸಲ್ಲಿಸಲಾಗಿತ್ತು.

ಕುಕ್ಕರ್, ಸೀರೆ ಹಂಚಿಕೆ ಆರೋಪ

ಚುನಾವಣೆ ಹಿನ್ನಲೆ ಎಂಎಲ್​ಸಿ ಶಂಖರ್ ಅವರು ಕುಕ್ಕರ್, ಸೀರೆ ಹಂಚಿಕೆ ಮಾಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುರು ಬಸವರಾಜ ಅವರು ದೂರು ನೀಡಿದ್ದರು. ಅದರಂತೆ ಪೊಲೀಸರು, ಕಲಂ 171 E ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರ್. ಶಂಕರ ಕಚೇರಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆ, ತಟ್ಟೆ, ಮಕ್ಕಳ ಸ್ಕೂಲ್ ಬ್ಯಾಗ್​ಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಕಚೇರಿ ಒಳಗೆ ಯಾರೂ ಹೋಗದಂತೆ ಶಹರ ಠಾಣೆ ಪೊಲೀಸರು ಕಟ್ಟೆಚ್ಚರವಹಿಸಿದ್ದರು.

ಇದನ್ನೂ ಓದಿ: ವಿನಯ್ ಕುಲಕರ್ಣಿ ಹೆಸರು ಕೇಳಿಬರುತ್ತಿದ್ದಂತೆಯೇ ಬದಲಾದ ಶಿಗ್ಗಾಂವಿ ರಾಜಕೀಯ ಚಿತ್ರಣ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸಿಎಂ ಆಪ್ತರು

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿರುವುದಕ್ಕೆ ಆರ್​. ಶಂಕರ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ವಿರುದ್ಧ ಸಂಚು ಹೂಡಲಾಗಿದೆ ಎಂದು ಆರೋಪಿಸಿರುವ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ನಾನೂ ಕಾರಣ.

ಬಸವರಾಜ ಬೊಮ್ಮಾಯಿ ಮತ್ತು ಆರ್ ಅಶೋಕ ನನ್ನ ಮನೆಗೆ ಬಂದು ಬೆಂಬಲ ಕೋರಿದ್ದರು. ಅದಾದ ನಂತರ ಅವರು ಪ್ರತಿ ದಿನ ನನ್ನನ್ನು ನೋಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳಿದ್ದರೂ ನಮ್ಮನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಶಂಕರ್ ಆರೋಪ ತಳ್ಳಿಹಾಕಿದ್ದ ಸಿಎಂ ಬೊಮ್ಮಾಯಿ, ತನಿಖಾ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ಯಾರೇ ತಪ್ಪು ಮಾಡಿದರೂ ಶಿಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada