ತಾರಾಲಯ ಲೋಕಾರ್ಪಣೆ ವಿಷಯದಲ್ಲಿ ಕಾಂಗ್ರೆಸ್​- ಬಿಜೆಪಿ ನಡುವೆ ವಾರ್: ಹೆಚ್​​ಕೆ ಪಾಟೀಲ್ ವಿರುದ್ಧ ಸಂಕನೂರ ಕಿಡಿ

ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯ ವಿಷಯದಲ್ಲಿ ಶಾಸಕ ಹೆಚ್​.ಕೆ.ಪಾಟೀಲ್​ ಮತ್ತು ಬಿಜೆಪಿ ಎಂಎಂಸಿ ಸಂಕನೂರ ನಡುವೆ ಕ್ರೆಡಿಟ್​ ಫೈಟ್​ ನಡೆಯುತ್ತಿದೆ.

ತಾರಾಲಯ ಲೋಕಾರ್ಪಣೆ ವಿಷಯದಲ್ಲಿ ಕಾಂಗ್ರೆಸ್​- ಬಿಜೆಪಿ ನಡುವೆ ವಾರ್: ಹೆಚ್​​ಕೆ ಪಾಟೀಲ್ ವಿರುದ್ಧ ಸಂಕನೂರ ಕಿಡಿ
ಬಿಜೆಪಿ ಎಂಎಂಸಿ ಸಂಕನೂರ, ಶಾಸಕ ಹೆಚ್​.ಕೆ.ಪಾಟೀಲ್​
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 19, 2023 | 4:52 PM

ಗದಗ: 8.58 ಕೋಟಿ ವೆಚ್ಚದಲ್ಲಿ ನಗರದ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯವನ್ನು ಶಾಸಕ ಹೆಚ್​.ಕೆ.ಪಾಟೀಲ್ (HK Patil) ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಟಗೇರಿಯಲ್ಲಿ ತಾರಾಲಯ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ಅಪಾರ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಬಿಜೆಪಿ ಎಂಎಂಸಿ ಸಂಕನೂರ ಹೆಚ್​.ಕೆ.ಪಾಟೀಲ್ ವಿರುದ್ಧ ಕಿಡಿಕಾರಿದರು. ತರಾತುರಿಯಲ್ಲಿ ತಾರಾಲಯ ಲೋಕಾರ್ಪಣೆ ಮಾಡಿದ್ದಾರೆ. ತಾರಾಲಯ ಲೋಕಾರ್ಪಣೆಗೆ ಡಿಸಿ ಯಾಕೆ ಅನುಮತಿ‌ ಕೊಟ್ಟರು ಎಂದು ಪ್ರಶ್ನಿಸಿದರು. ತಾರಾಲಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ 7.3 ಕೋಟಿ ರೂ. ನೀಡಿದೆ ಎಂದರು. ಆ ಮೂಲಕ ತಾರಾಲಯ ಲೋಕಾರ್ಪಣೆ ವಿಷಯದಲ್ಲಿ ಕಾಂಗ್ರೆಸ್​ ಮತ್ತು BJP ನಡುವೆ ಕ್ರೆಡಿಟ್​ಗಾಗಿ ಫೈಟ್ ಶುರುವಾದಂತಾಗಿದೆ.

ನಮ್ಮ ಸಚಿವರಾದ ಅಶ್ವಥ್ ನಾರಾಯಣ, ಬಿ.ಸಿ ಪಾಟೀಲ್, ಸಿ.ಸಿ ಪಾಟೀಲ್​​ರನ್ನು ಬಿಟ್ಟು‌ ಲೋಕಾರ್ಪಣೆ ಮಾಡುತ್ತೀರಾ ಎಂದು ವಾದ್ಗಾಳಿ ಮಾಡಿದರು. ಚುನಾವಣೆ ವೇಳೆ ಲಾಭ ಪಡೆಯಲು ಹೊರಟಿರಾ ಹೆಚ್​.ಕೆ ಪಾಟೀಲ್​ರೇ ಎಂದು ಗರಂ ಆಗಿದ್ದಾರೆ. ಸೈನ್ಸ್ ಸೆಂಟರ್ ಮಾಡಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಅಲ್ಲ. ಸುಮ್ಮಸುಮ್ಮನೇ ಕ್ರೆಡಿಟ್ ಪಡಿಯಬೇಡಿ. ಬಿಜೆಪಿ ಮಾಡಿದ್ದ ಕಾರ್ಯಕ್ರಮ ಹೈಜಾಕ್‌ ಮಾಡಿ ಹೆಚ್.ಕೆ ಪಾಟೀಲ್ ಕ್ರೆಡಿಟ್ ಪಡೆಯಲು ಹೊರಟಿದ್ದು ದುರ್ದೈವ ಎಂದು ಸಂಕನೂರ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ಪ್ರೇರಣೆ: ಅಡ್ಡಂಡ ಕಾರ್ಯಪ್ಪ

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಬೇಕು ಎಂದು ಇನ್ನೂ ನಿರ್ಧಾರ ಆಗಿಲ್ಲ: ಹೆಚ್​​.ಕೆ.ಪಾಟೀಲ್‌  

ಮಾಜಿ ಸಿಎಂ ಸಿದ್ದರಾಮಯ್ಯ 2 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೆಚ್​​.ಕೆ.ಪಾಟೀಲ್‌ ಹೇಳಿದರು. ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಬೇಕು ಎಂದು ಇನ್ನೂ ನಿರ್ಧಾರ ಆಗಿಲ್ಲ. ಹೈಕಮಾಂಡ್​ ಹೇಳಿದ ಕಡೆ ಸ್ಪರ್ಧೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಹಲವು ಕ್ಷೇತ್ರಗಳಿಂದ ಆಹ್ವಾನ ಬಂದಿದೆ. ವರಿಷ್ಠರು ಹೇಳಿದ ಕಡೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯಗೆ ಬಹಳ ಒತ್ತಾಯವಿದೆ. ಮೈಸೂರು ಜಿಲ್ಲೆಯಲ್ಲೂ ಕಣಕ್ಕಿಳಿಯುವಂತೆ ಒತ್ತಾಯ ಇದೆ ಎಂದು ಹೇಳಿದರು.

ಇದನ್ನೂ ಓದಿ: ಶ್ರೀರಾಮುಲು 200 ಕೋಟಿ ಹಣ ಖರ್ಚು ಮಾಡಿದರೂ ಗೆಲ್ಲುವುದಿಲ್ಲ: ಶಾಸಕ ಬಿ ನಾಗೇಂದ್ರ

ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು

ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಹಾಗಾದರೆ ಅವರ  ಮುಂದಿನ ಆಯ್ಕೆ ವರುಣನಾ ಅಥವಾ ಬಾದಾಮಿನಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿಂದೆ ಕೋಲಾರ ಬಾದಾಮಿ ವರುಣ ಕ್ಷೇತ್ರದ ಬಗ್ಗೆ ಹೇಳಿದ್ದ ಸಿದ್ಧರಾಮಯ್ಯ, ಮೂರು ಕ್ಷೇತ್ರ ಫೈನಲ್ ಆಗಿದೆ. ಒಂದರಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು.

ಇದೀಗ ಕೋಲಾರದಿಂದ ಸ್ಪರ್ಧೆ ಬಹುತೇಕ ಇಲ್ಲವೆನ್ನಲಾಗುತ್ತಿದ್ದು, ಈ ಹಿನ್ನೆಲೆ ವರುಣ ಅಥವಾ ಬಾದಾಮಿ ಆಯ್ಕೆ ಸಾಧ್ಯತೆ ಎನ್ನಲಾಗುತ್ತಿದೆ. ಅಥವಾ ವರುಣ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಒಲವು ತೋರಿದಂತಿದೆ. ವರುಣಗೆ ಬಂದರೆ ಮಗ ಡಾ. ಯತೀಂದ್ರ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಅಳೆದು ತೂಗಿ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ