‘ಹರಿಕಥೆ ಅಲ್ಲ ಗಿರಿಕಥೆ’ ರಿಲೀಸ್ ಆದ ಖುಷಿಯಲ್ಲಿ ‘ಹೆಂಗೆ ನಾವು’ ರಚನಾ ಜತೆ ಹೊಸ ಹುಡುಗಿ ತಪಸ್ವಿನಿ ಮಾತು
ತಪಸ್ವಿನಿ ಪೂಣಚ್ಚ, ರಚನಾ ಇಂದರ್, ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದಲ್ಲಿ ಸಖತ್ ಕಾಮಿಡಿ ಇದೆ. ಸಿನಿಮಾ ರಿಲೀಸ್ ಆದ ಖುಷಿಯಲ್ಲಿ ರಚನಾ ಮತ್ತು ತಪಸ್ವಿನಿ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಚಿತ್ರ ರಿಲೀಸ್ ಆಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿಯರಾದ ರಚನಾ ಇಂದರ್ ಹಾಗೂ ತಪಸ್ವಿನಿ ಪೂಣಚ್ಚ (Thapaswini Poonacha) ಅಭಿನಯಿಸಿದ್ದಾರೆ. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ‘ಹೆಂಗೆ ನಾವು’ ಅಂತ ಡೈಲಾಗ್ ಹೊಡೆದಿದ್ದ ರಚನಾ (Rachana Inder) ಅವರು ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಇನ್ನು, ತಪಸ್ವಿನಿ ಅವರಿಗೆ ಇದು ಮೊದಲ ಸಿನಿಮಾ. ಈ ಇಬ್ಬರು ನಟಿಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ರಿಯಲ್ ಬದುಕಿಗೆ ಹತ್ತಿರವಾಗಿದೆ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ; ಏನು ಇದರ ಕಹಾನಿ?