ಚಿತ್ರದುರ್ಗ ಜಿಲ್ಲಾಸ್ಪತ್ರೆ ಡಯಾಲಿಸಿಸ್ ವಿಭಾಗದ ಸಿಬ್ಬಂದಿ ಮುಷ್ಕರ, ರೋಗಿಗಳ ಪರದಾಟ
ಈ ಪ್ರಕ್ರಿಯೆಗೆ ಪ್ರತಿರೋಗಿಯಿಂದ ಕನಿಷ್ಟ ರೂ. 5,000 ಖರ್ಚಾಗುತ್ತಿದೆ ಎಂದು ಹಿರಿಯ ನಾಗರಿಕರು ಹೇಳುತ್ತಿದ್ದಾರೆ. ಗಂಜಿ ಕುಡಿದು ಬದುಕುವ ನಾವು ರೂ. 5,000 ಎಲ್ಲಿಂದ ತರಬೇಕು ಅಂತ ಅವರು ಕೇಳುತ್ತಾರೆ. ಅವರಿಗೆ ಪರ್ಯಯ ವ್ಯವಸ್ಥೆ ಕಲ್ಪಿಸಬೇಕಿದೆ, ಆದರೆ ಮೊರೆ ಯಾರಿಗಿಡಬೇಕು?
ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಿಂದ ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಗೆ (dialysis) ಬಂದಿರುವ ಈ ಹಿರಿಯ ನಾಯಕರು (senior citizen) ಪಡುತ್ತಿರುವ ಪಡಿಪಾಟಲು ಕೇಳುತ್ತಿದ್ದರೆ ಬೇಜಾರುಗುತ್ತದೆ ಮಾರಾಯ್ರೇ. ಆಸ್ಪತ್ರೆ ಡಯಾಲಿಸಿಸ್ ವಿಭಾಗದ ಸಿಬ್ಬಂದಿ ವಿವಿಧ ಬೇಡಿಕಗಳನ್ನು ಆಗ್ರಹಿಸಿ ಮುಷ್ಕರ (protest) ನಡೆಸುತ್ತಿರುವುದರಿಂದ ಡಯಾಲಿಸಿಸ್ ಗೆ ಬಂದವರು ಅತಂತ್ರರಾಗಿದ್ದಾರೆ. ಸರ್ಕಾರ ಡಯಾಲಿಸಿಸ್ ಕೇಂದ್ರಗಳನ್ನು ಖಾಸಗಿಯವರಿಗೆ ಒಪ್ಪಿಸಿದ ಬಳಿಕ ಈ ಪ್ರಕ್ರಿಯೆಗೆ ಪ್ರತಿರೋಗಿಯಿಂದ ಕನಿಷ್ಟ ರೂ. 5,000 ಖರ್ಚಾಗುತ್ತಿದೆ ಎಂದು ಹಿರಿಯ ನಾಗರಿಕರು ಹೇಳುತ್ತಿದ್ದಾರೆ. ಗಂಜಿ ಕುಡಿದು ಬದುಕುವ ನಾವು ರೂ. 5,000 ಎಲ್ಲಿಂದ ತರಬೇಕು ಅಂತ ಅವರು ಕೇಳುತ್ತಾರೆ. ಅವರಿಗೆ ಪರ್ಯಯ ವ್ಯವಸ್ಥೆ ಕಲ್ಪಿಸಬೇಕಿದೆ, ಆದರೆ ಮೊರೆ ಯಾರಿಗಿಡಬೇಕು?
Latest Videos