ರಚಿತಾ ರಾಮ್ಗೆ ಭರ್ಜರಿ ಸ್ವಾಗತ ಕೊಟ್ಟ ಮುಧೋಳ ಮಂದಿ: ವಿಡಿಯೋ
Rachita Ram: ಮುಧೋಳದಲ್ಲಿ ಶನಿವಾರ ಆರಂಭವಾದ ರನ್ನ ವೈಭವ 2025 ಸೋಮವಾರ ಮುಕ್ತಾಯವಾಯ್ತು. ಸೋಮವಾರ ವೇದಿಕೆ ಮೇಲೆ ಮನರಂಜನೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಸಹ ಭಾಗಿ ಆಗಿದ್ದರು. ಈ ವೇಳೆ ಮುಧೋಳದ ಮಂದಿ ಭಾರಿ ಕರತಾಡನದೊಂದಿಗೆ ನಟಿಯನ್ನು ಸ್ವಾಗತಿಸಿದರು.
ಬಾಗಲಕೋಟೆಯ ಮುಧೋಳದಲ್ಲಿ ಕಳೆದ ಶನಿವಾರದಿಂದ ಸೋಮವಾರದ ವರೆಗೆ ರನ್ನ ವೈಭವ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆದಿದೆ. ಕಡೆಯ ದಿನವಾಗಿದ್ದ ಸೋಮವಾರದಂದು ರನ್ನ ವೈಭವ ವೇದಿಕೆ ಮೇಲೆ ಹಲವು ಸಿನಿಮಾ ತಾರೆಯರು ಒಟ್ಟಿಗೆ ಸೇರಿದ್ದರು. ವಿಶೇಷವಾಗಿ ನಟಿ ರಚಿತಾ ರಾಮ್ ಎಂಟ್ರಿ ವೇದಿಕೆಯ ಮೆರುಗು ಹೆಚ್ಚಿಸಿತು. ಭಾರಿ ಕರತಾಡನ, ಕೂಗಾಟದೊಂದಿಗೆ ರಚಿತಾ ರಾಮ್ ಅವನ್ನು ವೇದಿಕೆಗೆ ಸ್ವಾಗತಿಸಿದರು ಮುಧೋಳದ ಮಂದಿ. ರಚಿತಾ ರಾಮ್ ಸಹ ಗಾಳಿಯಲ್ಲಿ ಮುತ್ತು ತೇಲಿಬಿಟ್ಟು ಅಭಿಮಾನಿಗಳಿಗೆ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದರು. ವಿಜಯಪ್ರಕಾಶ್ ಹಾಡಿಗೆ ಮುಧೋಳದ ಮಂದಿ ತಲೆದೂಗಿದರು, ನಿರೂಪಕಿ ಅನುಶ್ರೀ ಹರಳು ಹುರಿದಂತೆ ಮಾತನಾಡಿ, ಪ್ರೇಕ್ಷಕರ ಜೋಶ್ ಅನ್ನು ಇನ್ನಷ್ಟು ಹೆಚ್ಚಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 25, 2025 12:05 PM