‘ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು’; ನಾಗಶೇಖರ್ ಖಡಕ್ ಮಾತು
ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಪ್ರಚಾರಕ್ಕೆ ಬರದೇ ಇರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗಶೇಖರ್ ಅವರು ಅಸಮಧಾನ ಹೊರಹಾಕಿದ್ದು, ದೂರು ನೀಡಿದ್ದರೆ. ಈಗ ಅವರು ಘಟನೆ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಸಂಜು ವೆಡ್ಸ್ ಗೀತಾ 2’ (Sanju Weds Geetha) ಸಿನಿಮಾಗೆ ಶ್ರೀನಗರ ಕಿಟ್ಟಿ ಹೀರೋ ಹಾಗೂ ರಚಿತಾ ರಾಮ್ ನಾಯಕಿ. ಆದರೆ, ಸಿನಿಮಾ ಪ್ರಚಾರಕ್ಕೆ ರಚಿತಾ ಬಂದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ನಾಗಶೇಖರ್ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ಆ ಬಳಿಕ ಮಾತನಾಡಿರುವ ಅವರು, ‘ನಾನು ಬಹಳ ಗೌರವದಿಂದ ಕಲಾವಿದರನ್ನು ನೋಡಿಕೊಳ್ಳುತ್ತೇವೆ. ರಚಿತಾ ರಾಮ್ ಮ್ಯಾನೇಜರ್ಗೆ ನಾನು ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಎರಡು ದಿನ ಬರದೇ ಇದ್ದಿದ್ದಕ್ಕೆ ಎರಡು ವರ್ಷಗಳ ಸಂಬಂಧ ಹಾಳಾಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದೇನೆ. ಮೆಸೇಜ್ ಕಳುಹಿಸಿದ್ದೇನೆ. ಜನವರಿ 8ರವರೆಗೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡಿದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವ ಕಲಾವಿದರೂ ಹೀಗೆ ಮಾಡಬಾರದು. ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ಸ್ಪಷ್ಟಪಡಿಸಬೇಕು’ ಎಂದು ನಾಗಶೇಖರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 18, 2025 12:24 PM
